ತುಮಕೂರು: ಕೊರಟಗೆರೆ ತಾಲ್ಲೂಕಿನ ವಿವಿಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯಿಂದ ವಶ ಪಡಿಸಿಕೊಂಡಿದ್ದ ಮದ್ಯ ನಾಶ ಪಡಿಸಲಾಯಿತು.
ಕಳೆದ ಸುಮಾರು ವರ್ಷಗಳಿಂದ ಚುನಾವಣೆ ಸಮಯದಲ್ಲಿ ಸೇರಿದಂತೆ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸ್ ಇಲಾಖೆಯ 7 ಪ್ರಕರಣಗಳು ಹಾಗೂ ಅಬಕಾರಿ ಇಲಾಖೆಯ 5 ಪ್ರಕರಣಗಳಲ್ಲಿ ಸುಮಾರು ಮದ್ಯ ವಶಕ್ಕೆ ಪಡೆಯಲಾಗಿತ್ತು.
64 ಲೀಟರ್ ನಷ್ಟು ಮದ್ಯ ಮತ್ತು 2 ಲೀಟರ್ ಬಿಯರ್ ಸೇರಿ 30 ಸಾವಿರ ಬೆಲೆಯ ಮದ್ಯವನ್ನು ತಾಲ್ಲೂಕಿನ ಬೋಡಬಂಡೆನಹಳ್ಳಿ ಬಳಿ ಇರುವ ಕಸವಿಲೇವಾರಿ ಘಟಕದಲ್ಲಿ ದೀಪಕ್ ನೇತೃತ್ವದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಆದೇಶದಂತೆ ಮದ್ಯ ನಾಶ ಮಾಡಲಾಯಿತು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx