ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಗ್ರಾಮೀಣ ಮತ್ತು ಸಣ್ಣ ಉದ್ಯೋಗ ಇಲಾಖೆ ಕೃಷಿ ಇಲಾಖೆ ಜಿಲ್ಲಾ ತೋಟಗಾರಿಕಾ ಸಂಘ ಮತ್ತು ಜಿಲ್ಲಾ ಕೃಷಿಕ ಸಮಾಜ ವತಿಯಿಂದ 2023/ 24 ನೇ ಸಾಲಿನ ಜಿಲ್ಲಾ ಮಟ್ಟದ 64ನೇ ಫಲ ಪುಷ್ಪ ಪ್ರದರ್ಶನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಿದರು.
ಪ್ರದರ್ಶನ ಡಿಸೆಂಬರ್ 10ರವರೆಗೆ ಫಲ ಪುಷ್ಪ ಪ್ರದರ್ಶನ ಹಾಗೂ ಮಾರಾಟಗೊಳ್ಳಲಿದೆ. ವಿವಿಧ ಆಕರ್ಷಿಕ ವಸ್ತು ಪ್ರದರ್ಶನ ವಿವಿಧ ಅಲಂಕೃತಕ್ಕೆ ಸಸ್ಯಗಳು ಹಾಗೂ ಪುಷ್ಪಗಳು ಪ್ರದರ್ಶನಕ್ಕೆ ಇಡಲಾಗಿದೆ. ಅದರಂತೆ ವಿವಿಧ ಬಗೆಯ ಪುಷ್ಪಾಲಂಕರ ದಿಂದ ತಯಾರಿಸಲ್ಪಟ್ಟಿರುವ ಬೆಳಗಾವಿ ಸುಪ್ರಸಿದ್ಧ ಕಮಲ ಬಸತಿ, ಗುಡಿಸಿಲಿನ ಆಕೃತಿ ,ಹೂಗಳಿಂದ ಸುಂದರವಾದ ಕರ್ನಾಟಕ ನಕ್ಷೆ ಮತ್ತು ಶಾವಿಗೆ ಮತ್ತು ವಿವಿಧ ಪದಾರ್ಥಗಳಿಂದ ತಯಾರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮಿಗಳ ವಿಗ್ರಹ ಮತ್ತು ವೀರಾಣಿ ಕಿತ್ತೂರು ಚೆನ್ನಮ್ಮ ಕಲಾಕೃತಿಗಳು ಜನರನ್ನು ಆಕರ್ಷಣೆ ಮಾಡುತ್ತಾ ಇದೆ. ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಸಸಿಗಳನ್ನು ಬೆಳೆಸುವುದು ಮತ್ತು ತರಕಾರಿಗಳನ್ನು ಬೆಳೆಸುವುದು ಶಾಲಾ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುವ ಪ್ರದೇಶವಾಗಿದ್ದು ರೈತರಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್ ಗಳ ಸೇವೆ ಒದಗಿಸಬೇಕಾಗಿದೆ.
ರೈತರ ಬೆಳೆದಿರುವ ಫಲ ಪುಷ್ಪಗಳು ಬೇರೆ ರಾಷ್ಟ್ರಗಳಿಗೂ ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಇಚ್ಛೆ ವ್ಯಕ್ತಪಡಿಸಿದರು.
ಹ್ಯೂಮ್ ಪಾರ್ಕ್ ಕ್ಲಬ್ ರೋಡ್ ಸುಂದರವಾದ ವಾತಾವರಣ ದಲ್ಲಿ ನಡೆದಿರುವ ಫಲ ಪುಷ್ಪ ಪ್ರದರ್ಶನ ಜನರ ಆಕರ್ಷಿಕ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ತೋಟಗಾರಿಕೆ ಉಪ ನಿರ್ದೇಶಕರು ಮಾಂತೇಶ್ ಮುರುಗೋಡು ಹಾಗೂ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ ಗ್ರಾಮೀಣ ಹಾಗೂ ಸಣ್ಣ ಉದ್ಯಮಿ ಇಲಾಖೆ ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲಾ ಮಕ್ಕಳು ಉಪಸ್ಥಿತರಿದ್ದರು.


