ಸ್ಪೇನ್ ನ ಮಾರ್ಬೆಲ್ಲಾದಲ್ಲಿ ಪ್ರವಾಸಿ ತಾಣದ ಬೀಚ್ ಗಳ ಶುಚಿತ್ವ ಕಾಪಾಡಲು ಈ ಹೊಸ ನಿಮಯ ಜಾರಿಗೆ ತರಲಾಗಿದ್ದು ಸಮುದ್ರದಲ್ಲಿ ಆಟವಾಡುತ್ತಾ, ಬೀಚ್ ಬದಿಯಲ್ಲಿ, ಅಥವಾ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ ಬರೋಬ್ಬರಿ 67,000 ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, 2ನೇ ಬಾರಿ ಈ ತಪ್ಪು ಮಾಡಿದರೆ 1 ಲಕ್ಷ ರೂಪಾಯಿ ದಂಡ ಕೂಡ ಬೀಳುತ್ತೆ!
ಅಂದಹಾಗೆ ಸುಂದರ ಬೀಚ್ ಗಳನ್ನು ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬುತ್ತಾರೆ. ವೀಕೆಂಡ್ ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರವಾಸಿಗರು ತುಂಬುತ್ತಾರೆ. ಆದರೆ ಬೀಚ್ ನಲ್ಲಿ ಆಟವಾಡುತ್ತಾ ಕಾಲಕಳೆಯುವ ಪ್ರವಾಸಿಗರು, ಸಮುದ್ರ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರಿನ ಶುಚಿತ್ವ, ಹೈಜೀನ್ ಸಮಸ್ಯೆಯಾಗುತ್ತಿದೆ. ಹಲವರು ಪ್ರವಾಸಿಗರು ಈ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಮಾರ್ಬೆಲ್ಲಾ ನಗರ ಕಠಿಣ ನಿಯಮ ಜಾರಿಗೊಳಿಸಿದ್ದು ಸ್ಥಳೀಯ ಕೋಸ್ಟಲ್ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ.
ಆದರೆ ಈ ನಿಯಮ ಜಾರಿಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕಿಕ್ಕಿರಿದು ಸೇರಿದ ಜನಸಂದಣಿಯಲ್ಲಿ ಸಮುದ್ರದ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಯಾರು ಅನ್ನೋದು ಪತ್ತೆ ಹಚ್ಚುವುದು ಹೇಗೆ? ಬೀಚ್ ನೀರಿನೊಳಗೆ ನಿಂತು ಮೂತ್ರ ವಿಸರ್ಜನೆ ಮಾಡಿದರೆ ಹೇಗೆ ಪತ್ತೆ ಹಚ್ಚುತ್ತೀರಪ್ಪಾ? ಎಂದು ತರಹೇವಾರಿ ಕಮೆಂಟ್ ಮಾಡಿ, ಹೊಸ ನಿಯಮವನ್ನು ಟೀಕಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA