ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ ಆಕೆಯ ಕೈ ಹಿಡಿದೆಳೆದು, ತನ್ನನ್ನು ಮದುವೆ ಮಾಡಿಕೊ ಎಂದು ಪೀಡಿಸುತ್ತಿದ್ದ 19 ವರ್ಷ ವಯಸ್ಸಿನ ಯುವಕನಿಗೆ 7 ತಿಂಗಳುಗಳ ಜೈಲು ಶಿಕ್ಷೆ ಹಾಗೂ 10, ಸಾವಿರ ರೂಪಾಯಿ ದಂಡ ವಿಧಿಸಿ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(POCSO) ತೀರ್ಪು ನೀಡಿದೆ.
ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ 19 ವರ್ಷ ವಯಸ್ಸಿನ ಯುವಕ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದು, ಕೈ ಹಿಡಿದೆಳೆದಿದ್ದ. ಈ ಸಂಬಂಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಜಮಾಲ್ ಅಹಮದ್ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದರು.
ಅಭಿಯೋಜನೆ ವಿಚಾರಣೆ ಮಾಡಲಾದ ಸಾಕ್ಷ್ಯಗಳಿಂದ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಆರೋಪಿಗೆ 7 ತಿಂಗಳ ಸಜೆ ಮತ್ತು 40 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q