ಬೆಂಗಳೂರು: ಏಳು ತಿಂಗಳ ಗರ್ಭಿಣಿಯೊಬ್ಬರು ಸತತ 23 ಗಂಟೆಗಳ ಕಾಲ ಸ್ಯಾಕ್ರೋಫೋನ್ ನುಡಿಸಿ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಆವಲಹಳ್ಳಿಯ ಕಲಾವಿದೆ ಸುಬ್ಬಲಕ್ಷ್ಮಿ ಈ ಸಾಧನೆ ಮಾಡಿದ್ದಾರೆ.
ಸುಬ್ಬಲಕ್ಷ್ಮೀ 7 ತಿಂಗಳ ಗರ್ಭಿಣಿಯಾಗಿದ್ದು, ಇವರು ವಿರಾಮವನ್ನೇ ಪಡೆಯದೆ 23 ಗಂಟೆಗಳ ಕಾಲ ಸ್ಯಾಕ್ರೋಫೋನ್ ನುಡಿಸಿ ದಾಖಲೆ ನಿರ್ಮಿಸಿದ್ದಾರೆ. 13 ವರ್ಷಗಳಿಂದ ಸ್ಯಾಕ್ರೋಫೋನ್ ನುಡಿಸುತ್ತಿದ್ದಾರೆ.


