ಬೆಳಕೋಣಿ (ಚೌಧರಿ): ಸರಕಾರಿ ಪ್ರೌಢ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.
76ನೇ ಗಣರಾಜ್ಯೋತ್ಸವ ಹಿನ್ನೆಲೆ 10 ನೇ ತರಗತಿ ವಿದ್ಯಾರ್ಥಿಗಳು ‘ತಾಯಿ ಮಹತ್ವ ಏನು?’ ಎಂದು ನಾಟಕರೂಪದಿಂದ ತಿಳಿಸಿಕೊಟ್ಟರು.
ಪ್ರಾಂಶುಪಾಲರಾದ ಉಮಾಕಾಂತ ಚೋಪಡೇ ಮಾತನಾಡಿ, 26ನೇ ಜನವರಿ 1950 ಸಂವಿಧಾನವನ್ನು ಅಂಗೀಕರಿಸಿ, ಶಾಸನವನ್ನಾಗಿ ಒಪ್ಪಿಕೊಂಡ ದಿನ. ನಮ್ಮ ಸಂವಿಧಾನವನ್ನು ಗೌರವಿಸುವುದು, ಆಶಯಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ ಎಂದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಹಾಗೂ ವಿಶ್ವಕ್ಕೆ ಮಾದರಿ ಸ್ವರೂಪದ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಂಡು ಗೌರವ ಸಲ್ಲಿಸಿದರು.
ಶಾಲೆಯ ಹಿರಿಯ ಶಿಕ್ಷಕರಾದ ನವನಾಥ ವಡಗಾವೇ, ಶಿಕ್ಷಕರಾದ ಸಂಜೀವ ಕುಮಾರ್ ಬಿರಾದಾರ, ರವೀಂದ್ರ ರೆಡ್ಡಿ, ಅಶೋಕ್ ಜಾಧವ, ಜೀವನ ಬೆಂದ್ರೇ. ರಂಜನಾ ಗೈಕ್ವಾಡ, ಮಮತಾ ಹಾಗೂ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಎಂ.ಡಿ.ನಯೂಮ್ , ಗ್ರಾಪಂ ಸದಸ್ಯ ದೇವಿದಾಸ ಮಾಳಗೆ, ಶ್ರಾಫೋದಿನ ಸೌದಾಗಾರ, ಮನೋಜ ರೆಡ್ಡಿ, ಮೋಹಮ್ಮದ ಷಾ, ಪತ್ರಕರ್ತರಾದ ಅರವಿಂದ ಮಲ್ಲಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಪೊಲೀಸ್ ಸಿಬ್ಬಂದಿ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ , ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx