ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ತುಮಕೂರು ಮತ್ತು ಹೇಮಾವತಿ ನಾಗರಿಕ ಹಿತರಕ್ಷಣಾ ವೇದಿಕೆ (ರಿ), ಟೂಡಾ ಲೇಔಟ್, ಹೇಮಾವತಿ ಬಡಾವಣೆ, ರಾಜೀವ್ ಗಾಂಧಿನಗರ, ತುಮಕೂರು ಇವರುಗಳ ಸಹಯೋಗದೊಂದಿಗೆ 78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಗುರುವಾರ ಬೆಳಗ್ಗೆ 8:15 ಗಂಟೆಗೆ ಆಯೋಜಿಸಲಾಗಿತ್ತು.
ಪ್ರೊ. ಹೆಚ್. ಎಸ್. ಶಿವಯೋಗಿ, ವಿಶ್ರಾಂತ ಪ್ರಾಂಶುಪಾಲರು, (ನವೋದಯ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ, ತುಮಕೂರು) ಇವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಂತರ ಧ್ವಜಾರೋಹಣವನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಭಾರತೀಯರಾದ ನಾವು ಸ್ವಾತಂತ್ರ್ಯ ಸಿಕ್ಕ ದಿನವನ್ನು ಪ್ರತಿ ದಿನ ನೆನೆಯಬೇಕು. ಅದರ ಮಹತ್ವ ತಿಳಿಯಬೇಕು. ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದ ಪ್ರಾಣತೆತ್ತ, ಬಲಿದಾನವಾದ ಎಲ್ಲಾ ವೀರರನ್ನು ನೆನೆದು ಅವರಿಗೆ ನಮನ ಸಲ್ಲಿಸಬೇಕಾಗಿದೆ. ಆದರೆ ಇಂದು ಕೇವಲ ಸ್ವಾತಂತ್ರೋತ್ಸವ ಆಚರಣೆಯ ದಿನ ಮಾತ್ರ ನೆನೆಯುತ್ತಿರುವುದು ನೋವಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ದೇಶದ ಸ್ವಾತಂತ್ರ ಹೋರಾಟದ ಬಗ್ಗೆ ತಿಳಿಸಿ, ದೇಶಪ್ರೇಮ ಸದಾ ಜಾಗೃತಿಯಾಗಿ ಇರುವಂತೆ ಮಾಡುವುದು ಅನಿವಾರ್ಯವಾಗಿದೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಶ್ರೀಮಂತವಾಗಿದ್ದು, ನಾವು ಅವುಗಳನ್ನು ಕಳೆದುಕೊಳ್ಳದೆ, ನಮ್ಮ ತನವನ್ನು ಉಳಿಸಿಕೊಂಡು ಹೋಗುವುದು ನಾವು ನಮ್ಮ ದೇಶಕ್ಕೆ ನೀಡುವ ಗೌರವವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ.ಲೋಕೇಶ. ಆರ್ ರವರು ಹಾಗೂ ಪ್ರಾದೇಶಿಕ ಕೇಂದ್ರ ಎಲ್ಲಾ ಸಿಬ್ಬಂದಿ ವರ್ಗ ಮತ್ತು ತುಮಕೂರಿನ ಟೂಡಾ ಲೇಔಟ್,ರಾಜೀವ್ ಗಾಂಧಿನಗರ, ಹೇಮಾವತಿ ಬಡಾವಣೆಯ “ಹೇಮಾವತಿ ನಾಗರಿಕ ಹಿತರಕ್ಷಣಾ ವೇದಿಕೆ (ರಿ)”ಯ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ನಿರ್ದೇಶಕರುಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q