ಕೊರಟಗೆರೆ: ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಅಯ್ಕೆ ಚುನಾವಣೆ ನಡೆಯಲಿದ್ದು, ಒಟ್ಟು 362 ಮತದಾರರು ಬಿ–ವರ್ಗದ 7 ಸ್ಥಾನಗಳಿಗೆ ಮತ ಚಲಾಯಿಸಲಿದ್ದಾರೆ.
ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್. ಸಹಕಾರ ಸಂಘದ 2025 ರ ಚುನಾವಣೆಯಲ್ಲಿ 8 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 4 ಸ್ಥಾನಗಳಿಗೆ ಅ.19 ರಂದು ಚುನಾವಣೆ ನಡೆಯಲಿದೆ.
ಕೊರಟಗೆರೆ ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಆಯ್ಕೆ ಚುನಾವಣೆ ನಡೆಯಲಿದ್ದು ಒಟ್ಟು 362 ಮತದಾರರು ಬಿ ವರ್ಗದ 7 ಸ್ಥಾನಗಳಿಗೆ ಮತ ಚಲಾಯಿಸಲಿದ್ದಾರೆ.
ತಾಲೂಕು ವಿ.ಎಸ್.ಎಸ್.ಎನ್. ಸಹಕಾರ ಸಂಘಗಳಿಂದ ಉಮೇದುವಾರಿಕೆಯಾಗಿ ಬಂದ 14 ಮತದಾರರು ‘ಎ’ ವರ್ಗದ 5 ಸ್ಥಾನಕ್ಕೆ ಮತ ಚಲಾಯಿಸುವರು, ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ‘ಎ’ ವರ್ಗಕ್ಕೆ 10 ಅಭ್ಯರ್ಥಿಗಳು ಹಾಗೂ ‘ಬಿ’ ವರ್ಗಕ್ಕೆ 55 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು.
ಅ.13 ನಾಮಪತ್ರ ವಾಪಸ್ ಪಡೆಯಲು ಕಡೇ ದಿನಾಂಕವಾಗಿದ್ದು. ‘ಎ’ ವರ್ಗದಿಂದ ಕಸಬಾ ವಿ.ಎಸ್.ಎಸ್.ಎನ್. ನಿಂದ ಕೆ.ಎಸ್.ವಿನಯ್ ಕುಮಾರ್, ಹೊಳವನಹಳ್ಳಿಯಿಂದ ಜಯರಾಮು, ಬರಕ ದಿಂದ ಜಿ.ಕೆ.ಕುಮಾರ್, ಎಲೆರಾಂಪುರದಿಂದ ರಾಜಶೇಖರಯ್ಯ, ಕೊಡ್ಲಹಳ್ಳಿಯಿಂದ ಸಿದ್ದಲಿಂಗಪ್ಪ ಹಾಗೂ ‘ಬಿ’ ವರ್ಗದಿಂದ ಪರಿಶಿಷ್ಠ ಪಂಗಡದಿಂದ ಕೆ.ವಿ.ಮಂಜುನಾಥ, ಹಿಂದುಳಿದ ವರ್ಗ ‘ಬಿ’ ಯಿಂದ ಕೆ.ವಿ.ಪುರುಷೋತ್ತಮ, ಪರಿಶಿಷ್ಠ ಜಾತಿಯಿಂದ ಕೆ.ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾಮಾನ್ಯ ವರ್ಗ, ಹಿಂದುಳಿದ ವರ್ಗ ‘ಎ’ ಗಳ ತಲಾ ಒಂದು ಸ್ಥಾನಗಳಿಗೆ ಹಾಗೂ ಮಹಿಳಾ ಮೀಸಲಿನ ಎರಡು ಸ್ಥಾನಗಳಿಗೆ ಅ.19 ರಂದು ಚುನಾವಣೆ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC