ಬೆಂಗಳೂರು: ದೇಶದಲ್ಲೇ ಅತೀ ಉದ್ದದ ಮೆಟ್ರೋ ಸುರಂಗ ಮಾರ್ಗ ವಾದ ಬೆಂಗಳೂರಿನ ಗುಲಾಬಿ ಮಾರ್ಗದ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಸುರಂಗ ಕಾಮಗಾರಿ ಈಗಾಗಲೇ ಶೇ. 90ರಷ್ಟು ಕೆಲಸ ಪೂರ್ಣಗೊಂಡಿದೆ.
ಸುರಂಗ ಮಾರ್ಗದ 21 ಕಿಲೋ ಮೀಟರ್ ಗಳಲ್ಲಿ 19 ಕಿಲೋ ಮೀಟರ್ ಸುರಂಗ ಮಾರ್ಗ ಪೂರ್ಣಗೊಂಡಿದೆ. ನಮ್ಮ ಮೆಟ್ರೋ, ಗುಲಾಬಿ ಮಾರ್ಗವು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದಿಂದ ಉತ್ತರ ಭಾಗದ ನಾಗವಾರಕ್ಕೆ ಸಂಪರ್ಕಿಸುವ ಅತ್ಯಂತ ದೊಡ್ಡ ಹಾಗೂ ಕಾಮಗಾರಿಯಲ್ಲಿ ಅತ್ಯಂತ ಸವಾಲಾಗಿರುವ ಮಾರ್ಗವಾಗಿದೆ.


