95 ಕೆಜಿ ಗಾಂಜಾದೊಂದಿಗೆ ಮಧ್ಯಪ್ರದೇಶ ಪನ್ನಾ ಜಿಲ್ಲಾ ಬಜರಂಗದಳ ಸಂಚಾಲಕ ಬಂಧನ. ಬಜರಂಗದಳ ಜಿಲ್ಲಾ ಸಂಚಾಲಕ ಸುಂದರಂ ತಿವಾರಿ ಮತ್ತು ಆತನ ಸಹಚರ ಜೈ ಚೌರಸ್ಯ ರೈಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸತ್ನಾ ಜಿಲ್ಲೆಯ ಉಂಝೇರಾ ರೈಲು ನಿಲ್ದಾಣದಲ್ಲಿ ಈ ಗುಂಪನ್ನು ಬಂಧಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಇಳಿದ ಕೂಡಲೇ ರೈಲ್ವೇ ರಕ್ಷಣಾ ಪಡೆ ಅವರನ್ನು ಬಂಧಿಸಿದೆ. ಟೈಮ್ಸ್ ನೌ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ವರದಿ ಮಾಡಿವೆ.
95 ಕೆಜಿ ಗಾಂಜಾ ವಶಪಡಿಸಿಕೊಂಡ ಸುಮಾರು 24 ಗಂಟೆಗಳ ನಂತರ ಸುಂದರಂ ತಿವಾರಿ ಮತ್ತು ರಾಜ್ ಚೌರಸ್ಯ ವಿರುದ್ಧ ಆರ್‌ಪಿಎಫ್ಎಫ್ ಐಆರ್ ದಾಖಲಿಸಿದೆ. ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಪಿಎಫ್ ಮಾಹಿತಿ ನೀಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


