ತುಮಕೂರು: ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ಅವರ ಜಯಂತಿ ಉತ್ಸವ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಡಾ.ಬಾಬು ಜಗಜೀವನ್ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸುತ್ತಿದ್ದೇವೆ. ನಾವು ಕಚೇರಿಯಲ್ಲಿ ಜಯಂತಿ ಉತ್ಸವ ಆಚರಿಸಬೇಕಾದ ಪ್ರತಿ ಬಾರಿಯೂ ಒಂದೊಂದು ಹೊಸ ವಿಚಾರಗಳನ್ನು ನಾವು ಇಟ್ಟುಕೊಂಡು ಆಚರಣೆ ಮಾಡಬೇಕು ಮತ್ತು ಒಂದು ಹೊಸ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಜಯಂತಿ ಉತ್ಸವದ ಸದುದ್ದೇಶ ಎಂದರು.
ಬಿಹಾರ ರಾಜ್ಯದಲ್ಲಿ ಜನಿಸಿದ ಡಾ.ಬಾಬು ಜಗಜೀವನ್ ಅವರು, ಬಾಲ್ಯದಲ್ಲಿ ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದರು. ವಿದ್ಯಾರ್ಥಿಗಳಿಗೆ ಮೂರು ಪಾತ್ರೆಗಳಲ್ಲಿ ಬೇರೆ ಬೇರೆ ನೀರನ್ನು ಇಟ್ಟಾಗ ಅದನ್ನು ಹೊಡೆದು ಹಾಕಿ ಒಂದು ಪಾತ್ರೆಯಲ್ಲಿ ಇಡಬೇಕು ಎಂದು ಸಮಾನತೆ ಸಾರಿದರು. ಅವರನ್ನು ಸಮಾನತೆಯ ಹರಿಕಾರ ಎಂದು ನಾವು ಅವರಿಗೆ ಕರೆಯುತ್ತೇವೆ ಎಂದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್ ಉದ್ಘಾಟಿಸಿದರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್- ಪವಾಡ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಭಾಗವಹಿಸಿದ್ದರು.
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5