ತಿಪಟೂರು: ತಾಲ್ಲೋಕಿನ ಪ್ರಸಿದ್ದ ಪುಣ್ಯಕ್ಷೇತ್ರ ಹಾಲ್ಕುರಿಕೆ ಶ್ರೀ ಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಬನ್ನಿಮರ ಈಚಲಮರ ಹತ್ತುವ ಕಾರ್ಯಕ್ರಮವು ಭಕ್ತರ ಮೈ ನವಿರೇಳಿಸುವಂತೆ ಮಾಡಿತ್ತು
ರಥೋತ್ಸವದಿಂದ ಇಳಿದ ಶ್ರೀ ಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿಗೆ ಪೂಜೆಸಲ್ಲಿಸಿ ದೇವಿ ಮೈಮೇಲೆ ಅವಾಹನೆ ಅವಾಹನೆಹೊಂಡ ಅರ್ಚಕ ಮುಳ್ಳಗಳಿಂದ ಕೂಡಿದ ಈಚಲ ಮರವನ್ನ (ಬನ್ನಿಮರ)ಎರುತ್ತಿದ್ದಂತೆ ಜಾತ್ರೆಯಲ್ಲಿ ನೆರೆದಿದ್ದ ಭಕ್ತರಲ್ಲಿ ಹರ್ಷೋದ್ಗಾರ ಮನೆಮಾಡಿದ್ದು, ಮುಳ್ಳುಗಳ Nಡುವೆ ಮರವೇರಿದ ಅರ್ಚಕ ಪೂಜೆಸಲ್ಲಿಸಿ ಮರದಿಂದ ಕೆಳಗೆ ಇಳಿಸಲಾಯಿತು.
ಶ್ರೀಕೆಂಪಮ್ಮ ದೇವಿ ಶ್ರೀಪ್ಲೇಗಿನಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಆರತಿಬಾನ ಹಾಗೂ ಶ್ರೀಪ್ಲೇಗಿನಮ್ಮ ದೇವಿ ಗಂಗಾಸ್ನಾನ ನಡೆಸಲ್ಲಾಯಿತು. ತೇರು ಬೀದಿಯ ಮಜ್ಜನ ಬಾವಿಯಿಂದ ಕಳಶಸ್ಥಾಪನೆ ಮಾಡಿ ನಡೆಮುಡಿಯೊಂದಿ ಮೂಲಸ್ಥಾನಕ್ಕೆ ಕರೆತರಲಾಯಿತು
ನಂತರದಿನ ನಡೆದ ಶ್ರೀಕೆಂಪಮ್ಮ ದೇವಿ ಗಂಗಾಸ್ನಾನದಲ್ಲಿ ಮಜ್ಜನಬಾವಿಯಲ್ಲಿ ಕಳಶ ಸ್ಥಾಪನೆಗೊಂಡು ಶ್ರೀಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿಯವರನ್ನ ಪುಷ್ಟಾಲಂಕೃತ ದರ್ಭಾರ ವಾಹನದಲ್ಲಿ ಕೂರಿಸಿ ಕೀಲುಕುದುರೆ ನರ್ತನ ನಾಸೀಕ್ ಡೋಲ್ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಲಾತಂಡಗಳೊಂದಿಗೆ ಉತ್ಸವ ನೆರವೇರಿಸಲಾಯಿತು.
ಭಾನುವಾರ ಬೆಳಗ್ಗೆ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು ಶ್ರೀಕೆಂಪಮ್ಮ ದೇವಿ ಹಾಗೂ ಶ್ರೀಪ್ಲೇಗಿನಮ್ಮ ನವರನ್ನ ಅಲಂಕೃತ ತೇರಿನಲ್ಲಿ ಕೂರಿಸಿ ತೇರು ಎಳೆಯಲಾಯಿತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ಹರಕೆತೀರಿಸಿದರು ನಂತರ ತೇರಿನಿಂದ ಇಳಿದ ಶ್ರೀಕೆಂಪಮ್ಮ ದೇವಿ ಹಾಗೂ ಶ್ರೀಪ್ಲೇಗಿನಮ್ಮ ದೇವಿ ಅರ್ಚಕನಿಗೆ ಅವಾಹನೆಗೊಂಡು ಮೈದುಂಬಿಸಲಾಯಿತು ದೇವಿ ಆವಾಹನೆಹೊಂಡ ಅರ್ಚಕ ಉಳ್ಳುಗಳಿಂದ ಕೂಡಿದ ಬನ್ನಿಮರ ಹತ್ತಿಸಲಾಯಿತು.ನಂತರ ಉಯ್ಯಾಲೆ ಉತ್ಸವ ನಡೆಸಲಾಯಿತು.
ರಥೋತ್ಸವದಲ್ಲಿ ಕಿಟ್ಟೆಮೇಳ ಚಂಡೆವಾದನ.ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಲಾತಂಡಗಳೊಂದಿಗೆ ರಥೋತ್ಸವ ಹಾಗೂ ಅಮ್ಮನವರಿಗೆ ಮಣ್ಣೇವು ನಡೆಸಲಾಯಿತು . ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಉಚಿತ ಅನ್ನಸಂತರ್ಷಣೆ ಹಾಗೂ ಪಾನಕ ಪಲಹಾರ ವಿತರಿಸಲಾಯಿತು. ಜಾತ್ರೆಯಲ್ಲಿ ಹರಕೆಹೊತ್ತ ಭಕ್ತರು ಪೂಜೆಸಲ್ಲಿಸಿ ಭಕ್ತಿ ಸಮರ್ಪಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5