ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಸಮಿತಿ ಹುಚ್ಚವನಹಳ್ಳಿ ಬಣ ಸಂಘಟನೆ ವತಿಯಿಂದ ರಸಗೊಬ್ಬರ ಬೆಲೆ ಏರಿಕೆ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ರಸಗೊಬ್ಬರದ ದಾಸ್ತಾನು ಅಭಾವ ಖಂಡಿಸಿ ಬುಧವಾರದಂದು ದಾವಣಗೆರೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ದಾವಣಗೆರೆ ಜಿಲ್ಲೆಯ ಜಯಚಾಮ ರಾಜೇಂದ್ರ ಸರ್ಕಲ್ ನಿಂದ ಎ ಸಿ ಆಫೀಸ್ ವರಗೆ ಕಾಲ್ ನಡೆಗೆಯಲ್ಲಿ ಸರ್ಕಲ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರವು ರಸಗೊಬ್ಬರದ ಬೆಲೆಯನ್ನು ನಿಯಂತ್ರಿಸಲು ಆಗದೆ ಇರುವ ಕಾರಣ ರಸಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯ ಪ್ರವೇಶ ಮಾಡಿ ರಸಗೊಬ್ಬರದ ಬೆಲೆ ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕಾಗಿದೆ ಎಂಬುದಾಗಿ ಒತ್ತಾಯಿಸಿದರು.
ದೇಶದಲ್ಲಿ ರಸಗೊಬ್ಬರ ,ಡೀಸೆಲ್ ,ಪೆಟ್ರೋಲ್ , ಗ್ಯಾಸ್, ಆಹಾರ ಪದಾರ್ಥಗಳು ಹಾಗೂ ಎಣ್ಣಿ ಪದಾರ್ಥಗಳು ಕಾಲೇಜು ಶುಲ್ಕ ದರಗಳಲ್ಲಿಯೂ ಸಹ ಬೆಲೆ ಜಾಸ್ತಿ ಆಗುತ್ತಿದೆ. ಕಾರಣ ಕೇಳಿದರೆ ಅಂತರ ರಾಷ್ಟ್ರೀಯ ಮಾರುಕಟ್ಟೆ ಹಾಗೂ ರಷ್ಯಾ ಉಕ್ರೇನ್ ಯುದ್ಧ ಎಂದು ಹೇಳುತ್ತಾರೆ. ಆದರೆ ಕಳೆದ ನಾಲ್ಕು ಐದು ವರ್ಷಗಳಿಂದ ಯಾವುದೇ ಯುದ್ಧ ನಡೆದಿಲ್ಲ ಆದರೂ ದಿನನಿತ್ಯ ಬೆಲೆ ಏರಿಕೆಯಾಗುತ್ತಲೇ ಇದೆ. ರೈತರು ಬೆಳೆದ ಬೆಳೆಗೂ ಬೆಲೆ ಸಿಗುತ್ತಿಲ್ಲ ಈ ತರಹ ಬೆಲೆ ಏರಿಕೆ ಆದರೆ, ಜನರು ಹೇಗೆ ಜೀವನ ಸಾಗಿಸುವುದು ಕೃಷಿ ಕೂಲಿ ಕಾರ್ಮಿಕರ ಕೂಲಿ ಕೂಡ ಜಾಸ್ತಿ ಆಗುತ್ತಿದೆ. ಇದರಿಂದ ರೈತರು ನಂಬಿಕೊಂಡಿರುವಂತಹ ವ್ಯವಸಾಯವನ್ನೆ ಬಿಡುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗ ತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಈ ದುಸ್ಥಿತಿಯಿಂದ ದೇಶದ ಆಹಾರ ಭದ್ರತೆಗೆ ಕಂಟಕವಾಗಬಹುದು. ಆದರಿಂದ ಕೇಂದ್ರ ಸರ್ಕಾರವು ಕೂಡಲೇ ರಸಗೊಬ್ಬರ ಬೆಲೆಯನ್ನು ನಿಯಂತ್ರಿಸಿ ಕಡಿಮೆ ದರಗಳಲ್ಲಿ ರಸಗೊಬ್ಬರವು ರೈತರಿಗೆ ದೊರೆಯುವಂತೆ ಮಾಡಬೇಕು ಎಂದು ಹೊತ್ತಾಯಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಉಪವಿಭಾಗಧಿಕಾರಿಗಳ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಮಂಜುನಾಥ್, ಗುಮ್ಮನೂರು ಬಸವರಾಜ್, ಚಿರಂಜೀವಿ, ರವಿಕುಮಾರ್, ಆಣ್ಣಯ್ಯ, ಸಿದ್ದವೀರಪ್ಪ, ಸಿದ್ದೇಶ, ಪ್ರಕಾಶ ,ಹನುಮಂತ, ಉಮೇಶ ,ಚಂದ್ರು,ಭೀಮಣ್ಣ, ಅಜ್ಯಯ್ಯ, ಶರಣಪ್ಪ, ಕೆಂಚಪ್ಪ, ಅಸ್ತಪಪ್ಪನಹಳ್ಳಿ ಶರಣಪ್ಪ, ಪ್ರಹ್ಲಾದ್ ನಾಗನಾಥ ಹಾಗೂ ಇಂದಿರಾಗುರುಸ್ವಾಮಿ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


