ತಿಪಟೂರು:ರಾಜಕಾರಣ ಎಂದರೆ ಸಂಸದರು ಶಾಸಕರು ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆಯುವುದೊಂದೇ ಅಲ್ಲ ಸಿದ್ಧಾಂತವನ್ನು ಅಳವಡಿಸಿಕೊಂಡು ಸಮಾಜವನ್ನು ರೂಪಿಸುವಲ್ಲಿ ನೈಜ ರಾಜಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು.
ತಿಪಟೂರು ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಸಮಿತಿ ಹೋರಾಟ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ 2020 ಹಾಗೂ ಎಲ್ಲಾ ರೈತರಿಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರೈತರಿಗೆ ಯಾವುದೇ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇದ್ದಾಗ ಮಾತ್ರ ಸೂಕ್ತ ದರ ಸಿಗಲು ಸಾಧ್ಯ. ಇಲ್ಲವಾದಲ್ಲಿ ಅನ್ನದಾತನ ಸ್ಥಿತಿ ಶೋಚನೀಯವಾಗಲಿದೆ. ಇದರಿಂದ ಹೊರಬರಬೇಕಾದರೆ ಸಂಘಟಿತ ಹೋರಾಟ ಎಂದು ರೈತರಿಗೆ ಕರೆ ನೀಡಿದರು.
ಜನಸ್ಪಂದನ ಪ್ರಶ್ನ ಸಿಬಿ ಶಶಿಧರ್ ಮಾತನಾಡಿ, ಚಳುವಳಿಗಳು ರೈತರ ಸಂಕಷ್ಟಕ್ಕೆ ಪರಿಹಾರ ಯುವಜನರು ವಿಚಾರವಂತ ರಾಗುವ ಮೂಲಕ ಸಮಾಜದ ಮುಖಿಯಾಗಬೇಕೆಂದು ಅಂದರು.
ಈ ಕಾರ್ಯಕ್ರಮದಲ್ಲಿ ಸಂಯುಕ್ತ ಹೋರಾಟ ಜಿಲ್ಲಾ ಸಂಚಾಲಕ ಯತಿರಾಜ್ ಅಧ್ಯಕ್ಷತೆ ವಹಿಸಿದ್ದರು. ಬೇಸಾಯ ತಜ್ಞ ಡಾ.ಮಂಜುನಾಥ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಲ ಹಟ್ಟಿ, ಪ್ರಾಂತ ರೈತ ಸಂಘದ ಯಶವಂತ್, ರೈತ ಮುಖಂಡರುಗಳಾದ ನಾಗೇಂದ್ರ, ಯೋಗೀಶ್, ದಿಲ್ವಾರ್ ರಾಮದುರ್ಗ ಭಾಗವಹಿಸಿದ್ದರು
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5