ಹಿರಿಯೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆಯದೇ ಇದ್ದಿದ್ದರೆ, ಇಂದು ಈ ದೇಶವನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯಂದು ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ನಮ್ಮತುಮಕೂರು ಜೊತೆಗೆ ಅವರು ಮಾತನಾಡಿದರು.

ನಾನು ಒಬ್ಬಳು ಮಹಿಳೆಯಾಗಿ ಶಾಸಕಿಯಾಗಿ ಆಡಳಿತ ನಡೆಸುತ್ತಿದ್ದರೆ, ಅದು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರತಿಫಲ. ಇಂತಹ ವ್ಯಕ್ತಿಗಳು ನಮ್ಮ ಭಾರತ ದೇಶದಲ್ಲಿ ಇನ್ನೂ ಹುಟ್ಟಬೇಕು ಎಂದು ಅವರು ಇದೇ ಅಭಿಮಾನ ವ್ಯಕ್ತಪಡಿಸಿದರು.
ಪ್ರವರ್ಗ –1ರ ಒಕ್ಕೂಟದ ರಾಜ್ಯಾದ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಪ್ರಪಂಚದಲ್ಲಿ ಮೊದಲು ಪಿಹೆಚ್ ಡಿ ಪದವಿಯನ್ನು ಪಡೆದ ಮೊದಲ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದು, ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಲೈಬ್ರೆರಿಯಲ್ಲಿ ಹಾಕಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ದೇಶದ ವಿಭಿನ್ನ ಸಂಸ್ಕೃತಿ, ಭಾಷಾ ವೈವಿಧ್ಯತೆಗಳೆಲ್ಲವನ್ನು ಸಮನಾಗಿಸಿ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದರು.

ನಂತರ ಹಿರಿಯೂರು ನೆಹರು ಕ್ರೀಡಾಂಗಣದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದಂತಹ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದಿರುವಂತಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಹಾಗೂ ಇದೇ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಲ್ಯಾಪ್ ಟಾಪ್ ನೀಡಿ ಅವರಿಗೂ ಸಹ ಅಭಿನಂದಿಸಿದರು .
ಈ ಸಂದರ್ಭದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಡಿ.ಟಿ.ಶ್ರೀನಿವಾಸ್, ತಹಶಿಲ್ದಾರರಾದ ಶಿವಕುಮಾರ್, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಸಿ ಡಿ ಪಿ ಓ ಅಧಿಕಾರಿಯಾದ ಮಂಜುನಾಥ್ ಹಾಗೂ ನಿರಂಜನ್ ಮೂರ್ತಿ, ಡಿ ವೈ ಎಸ್ ಪಿ ಜಮೀರ್ ಅಹ್ಮದ್, ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ, ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು , ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ , ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಬಿ ಜೆ ಪಿ ಪ್ರಧಾನ ಕಾರ್ಯದರ್ಶಿಯಾದ ಕೇಶವಮೂರ್ತಿ ಹಾಗೂ ಎಲ್ಲಾ ನಗರ ಸಭೆ ಆಡಳಿತ ಅಧಿಕಾರಿಗಳು, ಹಾಗೂ ನಗರಸಭೆ ಸದಸ್ಯರುಗಳು,ಹಾಗೂ ಪತ್ರಕರ್ತರು, ಮಾಧ್ಯಮದವರು ಹಾಗೂ ಅಂಬೇಡ್ಕರ್ ಸಂಘಟನೆಯ ಎಲ್ಲಾ ಕಾರ್ಯಕರ್ತರು, ಮುಖಂಡರಾದ ಜಿ.ಎಲ್.ಮೂರ್ತಿ, ನಂದಕುಮಾರ್ , ಗಿರೀಶ್ , ಗಾಂಧಿನಗರ ಮಹಂತೇಶ್, ಶಿವಕುಮಾರ್, ರಾಘವೇಂದ್ರ, ಹನುಮಂತು, ರಾಮಚಂದ್ರಪ್ಪ, ಎಮ್ ಡಿ ರಮೇಶ್ , ಹನುಮಂತಪ್ಪ, ರಘುರಮೇಶ್, ಹಾಗೂ ಅಂಬೇಡ್ಕರ್ ಕೇಶವಮೂರ್ತಿ,ಡ್ಯಾನ್ಸರ್ ಮಹೇಶ್ , ಸಣ್ಣಪ್ಪ, ಹಾಗೂ ಎಲ್ಲಾ ತಾಲ್ಲೂಕು ಆಡಳಿತ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


