ಬಾಗಲಕೋಟ: ಜಿಲ್ಲೆಯ ಮುಧೋಳ ತಾಲೂಕಿನ ರಂಜಣಗಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 131ನೇ ಜಯಂತೋತ್ಸವ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ 115ನೇ ಜಯಂತಿ ಪ್ರಯುಕ್ತ ಜನತಾ ಸುಲ್ತಾನ್ ಬೇಪಾರಿ ಬ್ರದರ್ಸ್ ಮತ್ತು ಭೀಮ್ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಉಚಿತ ಕಣ್ಣಿನ ಆಪರೇಷನ್ ಹಾಗೂ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಬಿಸಿ ಊಟ ಕಾರ್ಯಕರ್ತರಿಗೆ, ವೀರ ಯೋಧರಿಗೆ , ಪಂಚಾಯತಿ ಸಿಬ್ಬಂದಿಗೆ ,ಲ ವಿವಿಧ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿ ಅಭಿನಂದನೆ ಕೋರಲಾಯಿತು.
ಸುರೇಶ್ ಕುಂಬಾರ ಮತ್ತು ಬಸು ಹೂಗಾರ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಬಾಳಪ್ಪ ಶಿರೋಳ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ವ್ಯಕ್ತಿ ಅಲ್ಲ. ಅವರು ಒಂದು ದೊಡ್ಡ ಶಕ್ತಿ. ಆಗಿನ ಕಾಲದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಲು ಭಗವಂತನೇ ಅಂಬೇಡ್ಕರ್ ರೂಪದಲ್ಲಿ ಹುಟ್ಟಿ ಬಂದರೆಂದು ತಿಳಿಸಿದರು.
ಉಪನ್ಯಾಸ ನೀಡಿದ ಶ್ರೀನಿವಾಸ್ ದಾಸರ, ಅಂಬೇಡ್ಕರ್ ರವರು ದಿನದ 24 ಗಂಟೆಯಲ್ಲಿ 20 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರು ಒಂದೇ ಜಾತಿ ಜನಾಂಗಕ್ಕೆ ಸೀಮಿತರಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರವರಿಂದ ಇಡೀ ಭಾರತ ದೇಶದ ಜನತೆ ಜೀವನ ಮಾಡುತ್ತಿದೆ. ನಾವೆಲ್ಲಾ ಭಾರತೀಯರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪೂಜಿಸಿ ಗೌರವಿಸಬೇಕು. ನಮ್ಮ ಮನೆಯಲ್ಲಿ ದೇವರ ಫೋಟೋಗಳನ್ನು ಇಟ್ಟುಕೊಳ್ಳುವ ಬದಲು , ಒಬ್ಬ ಶ್ರೇಷ್ಠ ಭಾರತ ಭಾಗ್ಯವಿಧಾತ ಅಂಬೇಡ್ಕರ್ ರವರ ಫೋಟೋ ಇಟ್ಟುಕೊಂಡು ಪೂಜಿಸಿದರೆ ನಾವು ಹುಟ್ಟಿದ್ದಕ್ಕೂ ಸಾರ್ಥಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಫೀಕ್ ಬೇಪಾರಿ ಬಾಬು ಬರಗಿ, ವೆಂಕಣ್ಣ ಪಾಟೀಲ್, ರವಿ ಪಾಟೀಲ್, ಸಿದ್ದು ಜಮ್ಮನಕಟ್ಟಿ ಸದಾಶಿವ ಕಿತ್ತೂರ್, ರಾಮಕೃಷ್ಣ ಗುರಕೇರ, ಲಕ್ಷ್ಮಣ್ ಲಚ್ಚವ್ವಗೋಳ , ದುರ್ಗಪ್ಪ ಗುರಕೇರ, ಸುನಿಲ್ ಕೆಳಗೇರಿ, ಪರಮಾನಂದ್ ಮ್ಯಾಗೇರಿ, ಹಸನ್ ಸಾಬ್ ಅಲ್ಗೂರ್, ಆಸಿಫ ಮುಧೋಳ್, ಸೈದುಸಾಬ ಅಲ್ಗೋರ್, ಕಲ್ಲೋಳಪ್ಪ ನಾಗನೂರ, ಸಿದ್ದು ಶಿಡ್ಲವ್ವಗೋಳ ಇನ್ನು ಹಲವಾರು ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಭೀಮ ಆರ್ಮಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


