ತುಮಕೂರು: ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ ಅವರು ತೆರಳುತ್ತಿದ್ದ ಕಾರು ಸೋಮವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಪರಿಣಾಮವಾಗಿ ಅವರಿಗೆ ತೀವ್ರ ತರಹದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರಿನಿಂದ ಸಿರಾಕ್ಕೆ ತೆರಳುತ್ತಿದ್ದ ಜಯಚಂದ್ರರವರ ಟೊಯೋಟಾ ಫಾರ್ಚೂನರ್ ಕಾರು ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಹೈವೇ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಜಯಚಂದ್ರ ಅವರ ಬಲಭುಜಕ್ಕೆ ಗಂಭಿರವಾದ ಏಟು ಬಿದ್ದಿದ್ದು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಾ ತಾಲೂಕಿನ ಸಿಬಿ ಬಳಿ ಈ ಅಪಘಾತ ನಡೆದಿದ್ದು, ಕಾರಿನೊಳಗೆ ಸಿಲುಕಿದ್ದ ಜಯಚಂದ್ರ ಅವರನ್ನು ಕಾರಿನ ಗಾಜು ಒಡೆದು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಪಘಾತದ ವೇಳೆ ಕಾರಿನಲ್ಲಿ ಟಿ.ಬಿ ಜಯಚಂದ್ರ ಅವರ ಆಪ್ತ ಸಹಾಯಕ ಹಾಗೂ ಗನ್ ಮ್ಯಾನ್ ಇದ್ದರು ಮಾಜಿ ಸಚಿವರ ಬಲಭುಜಕ್ಕೆ ತೀವ್ರ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರತ್ಯಕ್ಷದರ್ಶಿ ಸೈಯದ್ ಯಾಸೀರ್, ಮಾಜಿ ಸಚಿವರ ಕಾರು ಅಪಘಾತಕ್ಕೀಡಾದ ಕೂಡಲೇ ಕಾರಿನ ಗಾಜು ಹೊಡೆದು ಜೈಚಂದ್ರ ರವರನ್ನು ಹೊರತೆಗೆದು ಮತ್ತೊಂದು ಕಾರಿನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5