ಹೆಚ್.ಡಿ.ಕೋಟೆ: ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿ ಜಾಥಾದ ಮೇಲೆ ಬಜರಂಗದಳ ನಡೆಸಿದ ದಾಳಿಯ ವಿರುದ್ಧ ತಕ್ಷಣದ ಕ್ರಮಕ್ಕೆ ಸಿಪಿಐ ಮತ್ತು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿ ತಾಲ್ಲೂಕಿನ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಬಜರಂಗದಳದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಜೌಡಹಳ್ಳಿ ಜವರಯ್ಯ ಮಾತನಾಡಿ, ಏಪ್ರಿಲ್14ರಂದು ದೇಶಾದ್ಯಂತ ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ಅಚರಿಸಿದ್ದಾರೆ.
ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ದಲಿತ ಯುವಕರು ನಡೆಸುತ್ತಿದ್ದು ಬೈಕ್ ರ್ಯಾಲಿ ಮೇಲೆ ಬಜರಂಗದಳದ ಅಧ್ಯಕ್ಷ ಭೀಕರ ದಾಳಿ ನಡೆಸಿ ದಲಿತ ಯುವಕರ ಮೇಲೆ ಚಾಕುಗಳು,ಗಾಜಿನ ಬಾಟಲಿಗಳು ಮತ್ತು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎಂದರು.
ನಂತರ ತಾಲ್ಲೂಕು ಕಾರ್ಯದರ್ಶಿ ಹೆಗ್ಗನೂರು ಪುಟ್ಟಮಾದು ಮಾತನಾಡಿ, ದಾಳಿಕೋರರು ಅಂಬೇಡ್ಕರ್ ಅವರ ಭಾವಚಿತ್ರಗಳಿರುವ ಬ್ಯಾನರ್ ಗಳು ಧ್ವಜಗಳನ್ನು ಹರಿದು ಹಾಕಿ ಅವುಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಮತ್ತು ರ್ಯಾಲಿಗೆ ಉಪಯೋಗಿಸಿದ್ದ ಎಲ್ಲಾ ಪ್ಲೆಕ್ಸ್ಗಳಿಗೆ ಹಾನಿಯನ್ನುಂಟು ಮಾಡಿಲ್ಲದೆ ಧ್ವಂಸ ಮಾಡಿದ್ದಾರೆ. ಈ ದಾಳಿ ನಡೆದಾಗ ಪೊಲೀಸರು ಮೌನವಾಗಿ ನಿಂತಿದ್ದು, ಘಟನೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಗೂರು ಕೃಷ್ಣ ಮೂರ್ತಿ ಮಾತನಾಡಿ, ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವರದಿಯಾಗಿದೆ. ವರದಿಗಳ ಪ್ರಕಾರ ಏಪ್ರಿಲ್ 13 ರಂದು ಸಹ ಬಜರಂಗದಳ ದ ಅಧ್ಯಕ್ಷ ಅಂಬೇಡ್ಕರ್ ಜಯಂತಿ ರ್ಯಾಲಿಯ ಸಂಘಟಕರು ಪೊಲೀಸರನ್ನು ಸಂಪರ್ಕಿಸಿದ್ದರು. 14 ರಂದು ಹನುಮ ಎಂದು ರ್ಯಾಲಿಗೆ ಭಜರಂಗದಳ ಕೂಡ ಯೋಜಿಸುತ್ತಿರುವುದರಿಂದ ಮೊದಲು ಅಂಬೇಡ್ಕರ್ ಜಯಂತಿ ರ್ಯಾಲಿ ನಡೆಯಲಿದ್ದು. ನಂತರ ಭಜರಂಗದಳ ದ ರ್ಯಾಲಿ ನಡೆಯಲಿದೆ ಎಂದು ಪೋಲಿಸರು ಅವರಿಗೆ ತಿಳಿಸಿದ್ದಾರೆ ಹಿಂಸಾಚಾರದ ಸಂಭಾವ್ಯತೆಯ ಬಗ್ಗೆ ಅರಿವಿದ್ದರೂ ಅಂಬೇಡ್ಕರ್ ಜಯಂತಿ ರ್ಯಾಲಿಯ ಮೇಲಿನ ದಾಳಿಯನ್ನು ತಡೆಯಲು ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.
ಆದಿವಾಸಿ ಜನಾಂಗದ ಸದಸ್ಯ ವಿಜಯಕುಮಾರ್ ಮಾತನಾಡಿ, ಈ ಕುಕೃತ್ಯಕ್ಕೆ ಸರ್ಕಾರವನ್ನು ನೇರ ಹೊಣೆ. ದಲಿತರಿಗೆ ರಕ್ಷಣೆ ನೀಡಿದ ಸರ್ಕಾರವನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ( ದೌರ್ಜನ್ಯ ಕಾಯ್ದೆ) 1989ರ ಕಾಯಿದೆ ಯನ್ನು ಸಮಪರ್ಕವಾಗಿ ಜಾರಿಗೊಳಿಸಲು ವಿಫಲವಾಗಿರುವ ಸರ್ಕಾರಗಳ ನಿರ್ಲಕ್ಷ್ಯ ವೇ ದಲಿತರ ಮೇಲೆ ದಾಳಿ ನಡೆಯಲು ಕಾರಣವಾಗಿದೆ ಎಂದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು:
* ದಲಿತರ ಮೇಲಿನ ದಾಳಿಗೆ ಕಾರಣವಾದ ಒರಿಸ್ಸಾ ರಾಜ್ಯದ ಸರ್ಕಾರವನ್ನು ವಜಾಗೊಳಿಸಬೇಕು ಕ್ರೂರ ದಾಳಿ ನಡೆಸಿರುವ ದಾಳಿಕೋರರ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು.
* ದಾಳಿಯಿಂದ ನೊಂದ ವ್ಯಕ್ತಿಗಳಿಗೆ 20 ಲಕ್ಷ ಪರಿಹಾರ ನೀಡಬೇಕು .ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು.
* ದಾಳಿ ತಡೆಯಲು ವಿಫಲರಾದ ಸ್ಥಳೀಯ ಪೋಲೀಸರನ್ನು ತಕ್ಷಣದಲ್ಲಿ ವಜಾಗೊಳಿಸಬೇಕು. ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡ ಗಳ (ದೌರ್ಜನ್ಯ ತಡೆ) ಕಾಯಿದೆ.1989 ನ್ನು ಸಮಪರ್ಕವಾಗಿ ಜಾರಿಗೊಳಿಸಬೇಕು.
ಈ ಮೇಲ್ಕಂಡ ಎಲ್ಲಾ ಹಕ್ಕೊತ್ತಾಯ ಗಳನ್ನು ತಕ್ಷಣ ವೇ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


