ಹೆಚ್ ಡಿ ಕೋಟೆ /ಸರಗೂರು: ತಾಲ್ಲೂಕಿನ 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಆದೇಶದ ಮೇರೆಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಉಚಿತವಾಗಿ ಡಿಜಿಟಲ್ ಐಡಿ ಕ್ರಿಯೇಷನ್, ಎ.ಬಿ.- ಎ.ಆರ್.ಕೆ.ಕಾರ್ಡ್ ವಿತರಣೆಯನ್ನು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದು ವಿವಿಧ ಬಗೆಯ ಶಿಬಿರವನ್ನು ನಡೆಸಿದರು.
ಶಾಸಕರು ಅನಿಲ್ ಚಿಕ್ಕಮಾದುಭಾಗವಹಿಸಿ.ಆರೋಗ್ಯ ವಸ್ತು ಪ್ರದರ್ಶನವನ್ನು ಟೇಪ್ ಕತ್ತರಿಸುವ ಮೂಲಕ ಹಾಗೂ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಬಳಿಕ ಮಾತನಾಡಿದ ಅವರು, ಈ ಸುಂದರವಾದ ಅರ್ಥಪೂರ್ಣವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆ ಬಹಳ ಸಂತೋಷದ ಸಂಗತಿಯಾಗಿದೆ. ಸುಮಾರು 50 ಕ್ಕೂ ಹೆಚ್ಚು ವೈದ್ಯರುಗಳು ಹಾಜರಿದ್ದು. ಸಂತಾನೋತ್ಪತ್ತಿ,ಮಕ್ಕಳ ಅರೋಗ್ಯ,ಹದಿಹರೆಯದವರ ಸಮಗ್ರ ಆರೋಗ್ಯ,ಗರ್ಭ ನಿರೋಧಕಸೇವೆ,ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹೀಗೆ ಇನ್ನೂ ಹಲವು ಸಮಸ್ಯೆಗಳನ್ನು ತಪಾಸಣೆ ನಡೆಸಿ ಔಷಧಿಗಳನ್ನು ನೀಡುವ ದೃಷ್ಟಿಯಿಂದ ಈ ಆರೋಗ್ಯಮೇಳ ಕಾರ್ಯವನ್ನು ಆಯೋಜನೆ ಮಾಡಿದ್ದು, ಇದನ್ನು ನಮ್ಮ ತಾಲೂಕಿನ ಜನತೆಯು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ತಾಲ್ಲೂಕಿನ ಜನರು 1,000ಕ್ಕೂ ಹೆಚ್ಚು ಜನಸಂಖ್ಯೆ ಬಂದಿದ್ದು, ಶಿಬಿರಕ್ಕೆ ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು.
ಸೇವೆಗಳು:
*ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆ.
*ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆ.
*ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆ.
*ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಮತ್ತು(ಕ್ಷಯ,ಜ್ವರ. ಮಲೇರಿಯಾ. ಡೆಂಗ್ಯೂ)ಸೇವೆ.
ಅಸಾಂಕ್ರಾಮಿಕ ರೋಗಗಳು:
(ಮಧುಮೇಹ, ಅಧಿಕ ರಕ್ತದೊತ್ತಡ, ಧೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು ಮತ್ತು ಸಂಧಿವಾತ, ಕ್ಯಾನ್ಸರ್ ಬಾಯಿ, ಸ್ತನ ಮತ್ತು ಗರ್ಭಾಂಕುರ ಕ್ಯಾನ್ಸರ್ ಗಳ ಸ್ಕ್ರೀನಿಂಗ್) ಸೇವೆ.
*ಸಾಮಾನ್ಯ ಸೇವೆಗಳು :
ಆಯುಷ್ಮಾನ್ ಭಾರತ್ ಡಿಜಿಟಲ್ ಗುರುತಿನ ಚೀಟಿ ಮತ್ತು ಕಾರ್ಡ್ ವಿತರಣೆ)
*ಟೆಲಿಕನ್ಸಲ್ ಟೇಷನ್ :
*ದೂರು ಸಮಾಲೋಚನೆ ಮೂಲಕ ಚಿಕಿತ್ಸೆ ಸೌಲಭ್ಯ.
*ಭಾರತೀಯ ಚಿಕಿತ್ಸಾ ಪದ್ಧತಿ:
ಆಯುಷ್ ಸೇವೆಗಳು
* ಮೂಲಭೂತ ಚರ್ಮ, ನೇತ್ರ, ಕಿವಿ, ಮೂಗು, ಗಂಟಲು, ಸೇವೆ
*ಮೂಲಭೂತ ದಂತ ಆರೋಗ್ಯ ಸೇವೆ ಗಳು
*ಮೂಲಭೂತ ವೃದ್ಧಾಪ್ಯ ಹಾರೈಕೆ.
*ಪ್ರಯೋಗಾಲಯ ಕ್ಷ-ಕಿರಣ ಸೇವೆಗಳು.
*ಯೋಗ ಮತ್ತು ಅಪ್ತ ಸಮಾಲೋಚನೆ ಸೇವೆಗಳು.
*ರಕ್ತದಾನ ಶಿಬಿರ ಹಾಗೂ ಹೆಚ್.ಐ.ವಿ. ಪರೀಕ್ಷೆ ಸೇವೆಗಳು.
ಶಾಸಕ ಅನಿಲ್ ಚಿಕ್ಕಮಾದು ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹೆಚ್ ಸಿ ನರಸಿಂಹಮೂರ್ತಿ. ಜಿಲ್ಲಾ ವೈದ್ಯಾಧಿಕಾರಿ ಡಾ ಕೆ ಹೆಚ್ ಪ್ರಸಾದ್. ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಸೋಮಣ್ಣ, ಕೋಟೆ ತಹಶೀಲ್ದಾರ್ ರತ್ನಂಬಿಕಾ, ಸರಗೂರು ತಹಶೀಲ್ದಾರ್ ಚಲುವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಮಸ್ವಾಮಿ, ಮುಖಂಡರು ಮಲಾರಪುಟ್ಟಯ್ಯ, ದಸಂಸ(ಅಂಬೇಡ್ಕರ್ ವಾದ) ಚಾ ಶಿವಕುಮಾರ್, ಸಣ್ಣಕುಮಾರ., ಸೋಮಣ್ಣ(ಚನ್ನ), ಜಿವಿಕಾ ಬಸವರಾಜು, ಸಾದನೆ ಸಂಸ್ಥೆ ಮುಖಂಡ ಪ್ರಕಾಶ್ ಮತ್ತು ನಮ್ಮ ತಾಲೂಕಿನ ಅಧಿಕಾರಿ ವರ್ಗದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು


