ಸರಗೂರು: ತಾಲ್ಲೂಕಿನ ಹಾದನೂರು ಗ್ರಾಮದ ಗ್ರಾಮಸ್ಥರು ಆದಿ ಕರ್ನಾಟಕ ಸಮಾಜದಿಂದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಅಂಬೇಡ್ಕರ್ ಹಬ್ಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಪುತ್ಥಳಿ ಹೊತ್ತ ಜಾಥಾ ರಥಕ್ಕೆ ಚಾಲನೆ ನೀಡಲಾಯಿತು.
ಸಮುದಾಯ ಭವನದಿಂದ ಹೊರಟ ಜಾಥಾವು ಹೆಡಿಯಾಲ ಮತ್ತು ಚಿಕ್ಕಬರಗಿ ರಸ್ತೆಯ ಮೂಲಕ ಸಂಚರಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಅದೇ ಮಾರ್ಗವಾಗಿ ಸಮುದಾಯ ಭವನದಲ್ಲಿ ಕೊನೆಗೊಂಡಿತು.
ಜಾಥಾ ಹೊರಟ ಮಾರ್ಗ ಮಧ್ಯೆ ಯುವಕರು ಅಂಬೇಡ್ಕರ್ ಹಾಡುಗಳನ್ನು ಹೇಳಿಕೊಂಡು ನೃತೃ ಪ್ರದರ್ಶಿಸಿದರು.
ಮಂಗಳವಾದ್ಯ, ಸತ್ತಿಗೆಯು ಮೆರವಣಿಗೆಯಲ್ಲಿ ಸಾಗಿತ್ತು. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ದಿನ ದಲಿತರ ಬಂಧು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕು. ವಿದ್ಯಾವಂತರಾಗಿ, ಹೆಚ್ಚು ಪುಸ್ತಕಗಳನ್ನು ಓದಬೇಕು. ಆ ಮೂಲಕ ಎಲ್ಲರೂ ಸಂಘಟನೆ-ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮಹದೇವಸ್ವಾಮಿ, ಸುರೇಶ್, ಸಿದ್ದರಾಜು, ಗ್ರಾಪಂ ಸದಸ್ಯರು ರತ್ನಮ್ಮ ರಾಜೇಶ್, ಪ್ರಕಾಶ್, ಶಿವರಾಜ್, ಭಾಗ್ಯ ಕೇಂಪಸಿದ್ದ, ಮುಖಂಡರು ಮಹದೇವಯ್ಯ, ಮಹದೇವಸ್ವಾಮಿ, ಬಸವಣ್ಣ, ಮಹದೇವಸ್ವಾಮಿ, ಪುಟ್ಟಸ್ವಾಮಿ, ಮರಿಸ್ವಾಮಿ, ಚಿಕ್ಕಣ, ಮಾಜಿ ಗ್ರಾ.ಪಂ. ಅಧ್ಯಕ್ಷ ಸಿದ್ದರಾಜು, ಮಹದೇವಸ್ವಾಮಿ, ರಾಜಣ್ಣ, ನಂಜುಂಡಿ, ನಾಗೇಂದ್ರ, ನಾಗೇಶ್, ರಾಜಣ್ಣ, ವಣಕಾರ, ಶಶಿಕುಮಾರ್, ನಾಗರಾಜ್, ಸಣ್ಣಸ್ವಾಮಿ, ಸಿದ್ದ.ಕರಿಪುಟ್ಟಯ್ಯ, ಸ್ವಾಮಿ, ಪಾಪರಾಜ್, ಮದನ್, ಸಿದ್ದರಾಜು ಇನ್ನೂ ಶಾಲೆಯ ಮಕ್ಕಳು ಗ್ರಾಮ ದ ಗ್ರಾಮಸ್ಥರು ಕಾರ್ಯಕ್ರಮ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


