ಸರಗೂರು: ತಾಲ್ಲೂಕಿನ ಮೂಳ್ಳೂರು ಗ್ರಾ.ಪಂ. ಹಳೆಹೆಗ್ಗುಡಿಲು ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚುತ್ತಿದ್ದು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮಹದೇವನಾಯಕ ಅವರು ನೀರು ತರಲೆಂದು ಹೋಗುತ್ತಿದ್ದ ವೇಳೆ ಆನೆಗಳನ್ನು ಕಂಡು ಬೆಚ್ಚಿ ಬಿದ್ದು ಬೈಕ್ ನಿಂದ ಬಿದ್ದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಗೆ ಹಾನಿಯಾಗಿದೆ.
ಇಲ್ಲಿನ ಜನರಿಗೆ ಹಲವು ಬಾರಿ ಆನೆಗಳು ಎದುರಾಗಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಜನರು ಆನೆ ಹಾವಳಿಯ ಬಗ್ಗೆ ಬಂಡೀಪುರ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೆ , ಅವರು ಸರಗೂರಿನ ಅರಣ್ಯ ಅಧಿಕಾರಿಗಳಿಗೆ ಹೇಳಿ ಎಂದು ಹೇಳುತ್ತಾರೆ. ಸರಗೂರು ಅರಣ್ಯ ಇಲಾಖೆ ಅಧಿಕಾರಿಗಳು ನಾವು ಆನೆ ಕಾವಲುಗಾರರನ್ನು ಹಾಕಿದ್ದೇವೆ ಎಂದು ಹೇಳುತ್ತಾರೆ. ಆದರೆ ಆನೆ ಕಾವಲುಗಾರರು ಯಾವುದೇ ಕೆಲಸವನ್ನು ಮಾಡುತ್ತಿಲ್ಲ . ಮತ್ತೆ ಅರಣ್ಯ ಅಧಿಕಾರಿಗಳು ವ್ಯಾಪ್ತಿ ಸರಗೂರು ಭಾಗಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ. ನಾವು ಕೇವಲ ಆನೆ ಕಾವಲುಗಾರರನ್ನು ಮಾತ್ರ ಹಾಕಬಹುದು ಎಂದು ಹೇಳುತ್ತಾರೆ. ಹೀಗಿರಬೇಕಾದರೆ ನಾವು ಯಾರಿಗೆ ತಿಳಿಸಬೇಕು.? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಹಳೆಹೆಗ್ಗುಡಿಲು ಗ್ರಾಮದ ರೈತರು ಮತ್ತು ಸಾರ್ವಜನಿಕರು ಜನತೆ ಕಾಡು ಪ್ರಾಣಿಗಳ ಹಾವಳಿಯಿಂದ ತುಂಬಾ ನೋವು ಪಡುತ್ತಿದ್ದಾರೆ ಆಸ್ತಿ ಪಾಸ್ತಿ ನಷ್ಟವಾಗಿದೆ. ದಿನನಿತ್ಯ ಪ್ರಾಣಭಯದಿಂದ ಹೋರಾಡುವ ಸ್ಥಿತಿ ಹಳೆಹೆಗ್ಗುಡಿಲು ಗ್ರಾಮಸ್ಥರಿಗೆ ಉಂಟಾಗಿದೆ.
ದಯಮಾಡಿ ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವಂತ ಅರಣ್ಯಕ್ಕೆ ರೈಲು ಕಂಬಿ ವ್ಯವಸ್ಥೆ ಮಾಡಿಸಬೇಕು ಮತ್ತು ಸೋಲಾರ್ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ ಗ್ರಾಮಸ್ಥರು ಜನರು ನೀರು ತರುವಂತಹ ಗೇಟ್ ಹತ್ತಿರ ಆನೆ ಕಾವಲುಗಾರರನ್ನು ಹಾಕಬೇಕು ಈ ರೀತಿ ಮಾಡಿದರೆ ಹಳೆಹೆಗ್ಗುಡಿಲು ಗ್ರಾಮಸ್ಥರು ಬಹಳಷ್ಟು ಅನುಕೂಲವಾಗುತ್ತದೆ ಎಂದು ಜನರು ಮನವಿ ಮಾಡಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


