ರಾಜ್ಯದ ಸುಮಾರು ಅರ್ಧದಷ್ಟು ಬರಪೀಡಿತ 33 ಕೌಂಟಿಗಳಲ್ಲಿ 20 ಕಾಡ್ಗಿಚ್ಚುಗಳು ಹತ್ತಿ ಉರಿಯುತ್ತಿರುವುದರಿಂದ ನ್ಯೂ ಮೆಕ್ಸಿಕೋ ಗವರ್ನರ್ ಮಿಚೆಲ್ ಲುಜನ್ ಗ್ರಿಶಮ್ ತುರ್ತು ಘೋಷಣೆಗಳಿಗೆ ಸಹಿ ಹಾಕಿದ್ದಾರೆ.
ಉತ್ತರ ನ್ಯೂ ಮೆಕ್ಸಿಕೋದಲ್ಲಿ ಏಪ್ರಿಲ್ 6 ರಂದು ಪ್ರಾರಂಭವಾದ ಒಂದು ಕಾಳ್ಗಿಚ್ಚು ಶನಿವಾರದಂದು ಹೊಸ ಬೆಂಕಿಯೊಂದಿಗೆ ವಿಲೀನಗೊಂಡು ರಾಜ್ಯದಲ್ಲಿ ಅತಿದೊಡ್ಡ ಜ್ವಾಲೆಯನ್ನು ಸೃಷ್ಟಿಸಿದೆ. ಇದರಿಂದಾಗಿ ಮೋರಾ ಮತ್ತು ಸ್ಯಾನ್ ಮಿಗುಯೆಲ್ ಕೌಂಟಿಗಳಲ್ಲಿ ವ್ಯಾಪಕವಾದ ಸ್ಥಳಾಂತರ ನಡೆದಿದೆ.
ಭಾನುವಾರ 84 ಚದರ ಮೈಲಿ (217 ಚದರ ಕಿಲೋಮೀಟರ್) ಬೆಂಕಿ ಉರಿಯುತ್ತಿತ್ತು. ಉತ್ತರ ನ್ಯೂ ಮೆಕ್ಸಿಕೋದಲ್ಲಿ ಏಪ್ರಿಲ್ 17 ರಂದು ಪ್ರಾರಂಭವಾದ ಕಾಡ್ಗಿಚ್ಚು ಅನಿಯಂತ್ರಿತ ಗಾಳಿಯಿಂದ ಪೆÇಂಡೆರೋಸಾ ಪೈನ್, ಓಕ್ ಬ್ರಷ್, ಓಕೇಟ್‍ನ ಉತ್ತರ ಮತ್ತು ಮೊರಾ ಕೌಂಟಿಯ ಹುಲ್ಲಿನ ಪ್ರದೇಶ 81 ಚದರ ಮೈಲುಗಳಷ್ಟು ಬೆಂಕಿಗೆ ಸುಟ್ಟು ಹೋಗಿದೆ.
ಕಾಡ್ಗಿಚ್ಚಿನ ಕಾರಣದಿಂದ ಬಲವಂತವಾಗಿ ಸ್ಥಳಾಂತರಿಸಲಾಗಿದ್ದ ಅರಿಝೋನಾದಲ್ಲಿ, ಫ್ಲಾಗ್‍ಸ್ಟಾಫ್ ಪ್ರದೇಶದ ಕೆಲವು ಜನರನ್ನು ಭಾನುವಾರ ಬೆಳಿಗ್ಗೆ ಮನೆಗೆ ಮರಳಲು ಅನುಮತಿಸಲಾಗಿದೆ.
ನೆಬ್ರಸ್ಕಾದ ಕೆಲವು ಭಾಗಗಳಲ್ಲಿ ಗಾಳಿಯಿಂದ ಚಾಲಿತ ಕಾಡ್ಗಿಚ್ಚುಗಳು ನಿವೃತ್ತ ಕೇಂಬ್ರಿಡ್ಜ್ ಅಗ್ನಿಶಾಮಕ ಮುಖ್ಯಸ್ಥರನ್ನು ಕೊಂದು ಕನಿಷ್ಠ 11 ಅಗ್ನಿಶಾಮಕ ಸಿಬ್ಬಂದಿಯನ್ನು ಗಾಯಗೊಳಿಸಿವೆ ಎಂದು ಅಕಾರಿಗಳು ತಿಳಿಸಿದ್ದಾರೆ. ನ್ಯೂ ಮೆಕ್ಸಿಕೋದಲ್ಲಿ ಗಾಳಿ ಮತ್ತು ತಾಪಮಾನ ಶನಿವಾರ ಕಡಿಮೆಯಾಯಿತು ಆದರೆ ಬೆಂಕಿ ಸಾಕಷ್ಟು ಪ್ರಬಲವಾಗಿದೆ.
ಮೋಡ ಮತ್ತು ಹೊಗೆ ಹೊದಿಕೆಯು ಚಲಿಸುವುದರಿಂದ ಅರಣ್ಯಗಳು ಹೆಚ್ಚು ತೇವಾಂಶವನ್ನು ಉಳಿಸಿಕೊಂಡು ಉತ್ತರದ ಕಾಳ್ಗಿಚ್ಚುಗಳು ಭಾನುವಾರ ಅಂತ್ಯವಾಗುತ್ತವೆ ಎಂದು ಅಗ್ನಿಶಾಮಕ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇಲ್ಲಿಯವರೆಗೆ 200 ಕ್ಕೂ ಹೆಚ್ಚು ನಿರ್ಮಾಣಗಳ ಕಾಡ್ಗಿಚ್ಚಿನಿಂದ ಸುಟ್ಟುಹೋಗಿವೆ. ಹೆಚ್ಚುವರಿ 900 ನಿರ್ಮಾಣಗಳು ಅಪಾಯದಲ್ಲಿದೆ ಎಂದು ಲುಜನ್ ಗ್ರಿಶಮ್ ಹೇಳಿದ್ದಾರೆ. ಅಗ್ನಿಶಾಮಕ ನಿರ್ವಹಣಾ ಅಕಾರಿಗಳು ನಿಖರವಾದ ಹಾನಿಯ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಗಳು ಒಳ ಹೋಗಲು ಸಾಧ್ಯವಾಗದ ಕಾರಣ ಸಮೀಕ್ಷೆ ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಜೇಸನ್ ಕಾಯಿಲ್ ತಿಳಿಸಿದ್ದಾರೆ.
ಸುಮಾರು 1 ಸಾವಿರ ಅಗ್ನಿಶಾಮಕ ಸಿಬ್ಬಂದಿ ನ್ಯೂ ಮೆಕ್ಸಿಕೋದಾದ್ಯಂತ ಕಾಡ್ಗಿಚ್ಚು ನಂದಿಸಲು ಹೋರಾಡುತ್ತಿದ್ದಾರೆ. 3 ಮಿಲಿಯನ್ ಡಾಲರ್ ಅನುದಾನವನ್ನು ಖರ್ಚು ಮಾಡಲಾಗಿದೆ. ಹೆಚ್ಚಿನ ಸಂಪನ್ಮೂಲಗಳಿಗಾಗಿ ಲುಜಾನ್ ಗ್ರಿಶಮ್ ಶ್ವೇತಭವನಕ್ಕೆ ಮನವಿ ಸಲ್ಲಿಸಿದ್ದಾರೆ. ಪಟಾಕಿಗಳನ್ನು ನಿಷೇಸುವಂತೆಯೂ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ನ್ಯೂ ಮೆಕ್ಸಿಕೋದಲ್ಲಿ ಬೆಂಕಿ ತಗ್ಗಿಸುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಫೆಡರಲ್ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ಇದು ಕಠಿಣ ಬೇಸಿಗೆಯಾಗಿದೆ. ಪಟಾಕಿಗಳ ಮಾರಾಟವನ್ನು ನಿಷೇಸುವಂತೆ ತಾವು ಪ್ರತಿ ಬಾರಿ ಸ್ಥಳೀಯ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಅವರು ಗಮನ ಕೊಡಲಿಲ್ಲ ಎಂದರು.
ಅರಿಝೋನಾದಲ್ಲಿ, ಎರಡು ದೊಡ್ಡ ಕಾಡ್ಗಿಚ್ಚುಗಳು ಭಾನುವಾರ ಪ್ರೆಸ್ಕಾಟ್‍ನ ದಕ್ಷಿಣಕ್ಕೆ 10 ಮೈಲುಗಳು, ಫ್ಲಾಗ್‍ಸ್ಟಾಫ್‍ನ ಈಶಾನ್ಯಕ್ಕೆ 14 ಮೈಲುಗಳ ವರೆಗೆ ಬೆಂಕಿ ಮುಂದುವರೆದಿದೆ. ಫ್ಲಾಗ್‍ಸ್ಟಾಫ್ ಬಳಿ ಬೆಂಕಿಯು ಭಾನುವಾರದ ವೇಳೆಗೆ 33 ಚದರ ಮೈಲಿ ಅಂದರೆ ಶೇ.3ರಷ್ಟು ನಿಯಂತ್ರಣದಲ್ಲಿದೆ. ಕೌಂಟಿ ಅಕಾರಿಗಳ ಪ್ರಕಾರ 766 ಮನೆಗಳನ್ನು ಸ್ಥಳಾಂತರಿಸಲಾಗಿದೆ.
ಅರಿಝೋನಾ ಗವರ್ನರ್ ಡೌಗ್ ಡ್ಯೂಸಿ ಅವರು ಕೊಕೊನಿನೊ ಕೌಂಟಿಯಲ್ಲೂ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರೆಸ್ಕಾಟ್ ಬಳಿ ಕಾಳ್ಗಿಚ್ಚು ಕಳೆದ ಸೋಮವಾರ ಪ್ರಾರಂಭವಾಯಿತು 4.8 ಚದರ ಮೈಲಿಗಳ ವರೆಗೆ ವ್ಯಾಪಿಸಿತ್ತು. ಹೆಲಿಕಾಪ್ಟರ್‍ಗಳು ಮತ್ತು ಏರ್ ಟ್ಯಾಂಕರ್‍ಗಳು ಬೆಂಕಿಯ ಬೆಳವಣಿಗೆಯನ್ನು ನಿಯಂತ್ರಣದಲ್ಲಿಟ್ಟವು.
ನೆಬ್ರಸ್ಕಾ ಕೌಂಟಿಗಳಲ್ಲಿ ಶನಿವಾರ ರಾತ್ರಿ ಐದು ಕಾಡ್ಗಿಚ್ಚುಗಳು ಇನ್ನೂ ಉರಿಯುತ್ತಿವೆ. ನೆಬ್ರಸ್ಕಾ ನ್ಯಾಷನಲ್ ಗಾರ್ಡ್ ಮೂರು ಹೆಲಿಕಾಪ್ಟರ್‍ಗಳು ಮತ್ತು ಹಲವಾರು ಟ್ರಕ್‍ಗಳನ್ನು ಕೆನ್ನಾಲಿಗೆ ವಿರುದ್ಧ ಹೋರಾಡುತ್ತಿವೆ ಎಂದು ತಿಳಿಸಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy