ಕಳಪೆ ಫಾರ್ಮ್‍ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಐಪಿಎಲ್‍ನಿಂದ ಕೈ ಬಿಡಿ ಎಂದು ಮಾಜಿ ತರಬೇತುದಾರ ರವಿಶಾಸ್ತ್ರಿ ಹೇಳಿದ್ದಾರೆ. ಖಾಸಗಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ವಿರಾಟ್ ಕೊಹ್ಲಿ ಅವರು ಸತತ ಪಂದ್ಯಗಳನ್ನು ಆಡುತ್ತಿರುವುದರಿಂದ ಅವರು ತುಂಬಾ ಬಳಲಿದ್ದಾರೆ, ಆದ್ದರಿಂದೇ ಅವರಿಂದ ಕಳಪೆ ಪ್ರದರ್ಶನ ಬರುತ್ತಿದೆ.
ಆದ್ದರಿಂದ ಅವರು ಐಪಿಎಲ್‍ನ ಉಳಿದ ಪಂದ್ಯಗಳಿಂದ ಕೈಬಿಟ್ಟು ಇದುವರೆಗೂ ಅವರು ಆಡಿರುವ ಪಂದ್ಯಗಳ ವರಮಾನವನ್ನು ನೀಡುವಂತೆ ಆರ್‍ಸಿಬಿ ಫ್ರಾಂಚೈಸಿಗಳಿಗೆ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.ವಿರಾಟ್ ಕೊಹ್ಲಿ ಅವರಿಗೆ ಒತ್ತಡವಿದ್ದ ಪರಿಣಾಮದಿಂದಲೇ ಅವರು ಎಲ್ಲ ಮಾದರಿಯ ಕ್ರಿಕೆಟ್‍ಗೆ ರಾಜೀನಾಮೆಯನ್ನು ನೀಡಿದ್ದಾರೆ, ಆದರೂ ಸತತ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅವರು ತುಂಬಾ ಬಳಲಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಅವರಿಗೆ ಈಗ ವಿಶ್ರಾಂತಿ ಅವಶ್ಯಕವಾಗಿದೆ ಎಂದು ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಮಾತ್ರವಲ್ಲ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಸೇರಿದಂತೆ ಕೆಲವು ಶ್ರೇಷ್ಠ ಆಟಗಾರರು ಕೂಡ ಸತತ ಕ್ರಿಕೆಟ್ ಆಡುವುದರಿಂದ ಬಳಲುತ್ತಿದ್ದರಿಂದಲೇ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.ವಿರಾಟ್ ಕೊಹ್ಲಿ ಅವರು ಐಪಿಎಲ್‍ನಲ್ಲಿ ಉತ್ತಮ ರೆಕಾರ್ಡ್ ಹೊಂದಿದ್ದರೂ ಕೂಡ ಈ ಬಾರಿಯ ಐಪಿಎಲ್‍ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ, ಇದುವರೆಗೂ ಅವರು ಆಡಿರುವ 8 ಪಂದ್ಯಗಳಲ್ಲಿ ಕೇವಲ 16ರ ಸರಾಸರಿಯಲ್ಲಿ 128 ರನ್‍ಗಳು ಗಳಿಸುವ ಮೂಲಕ ಅಭಿಮಾನಿಗಳಲ್ಲೂ ನಿರಾಸೆ ಮೂಡಿಸಿದ್ದಾರೆ.
ವರದಿ ಆಂಟೋನಿ ಬೇಗೂರು