ತುಮಕೂರು: ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ನವರು ಆಡಳಿತ ನಡೆಸದಂತೆ ತೊಂದರೆ ಕೊಟ್ಟರು. ತುಮಕೂರಿಗೆ ದೇವೇಗೌಡರನ್ನು ಕರೆತಂದು ನಿಲ್ಲಿಸಿ ಸೋಲಿಸದವರು ಕಾಂಗ್ರೆಸ್ನವರೇ. ಕುಮಾರಸ್ವಾಮಿ ಸರ್ಕಾರವನ್ನು ಕಾಂಗ್ರೆಸ್ನವರು ಬೀಳಿಸಿಲ್ಲ ಎಂದು ಡಾ.ಜಿ.ಪರಮೇಶ್ವರ ಅವರು ಸಿದ್ಧಗಂಗಾ ಮಠದ ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಜಿಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು.
‘ಕಳೆದ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಒತ್ತಾಯ ಮಾಡಿ ಕಾಂಗ್ರೆಸ್ನವರೇ ನಿಲ್ಲಿಸಿದ್ರು, ಎಸ್.ಪಿ.ಮುದ್ದಹನುಮೇಗೌಡರನ್ನು ಅನ್ಯಾಯವಾಗಿ ರಾಜಕೀಯವಾಗಿ ಕೊಂದ್ರು’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜನತಾ ಜಲಧಾರೆ ರಥಯಾತ್ರೆಗೆ ತುಮಕೂರಿಗೆ ಆಗಮಿಸಿ ನಗರದ ಗಾಜಿನ ಮನೆಯಲ್ಲಿ ಮಾತನಾಡಿದ ದೇವೇಗೌಡ, ಇತ್ತೀಚೆಗೆ ಮಧುಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕೂಡ ನನ್ನ ಮೇಲಿನ ದ್ವೇಷದಿಂದ ಜಿಲ್ಲೆಯ ಒಕ್ಕಲಿಗ ಸಮುದಾಯದ ಮುಖಂಡರೇ ದೇವೇಗೌಡರನ್ನು ಬಲವಂತವಾಗಿ ಕರೆತಂದು ಸ್ಪರ್ಧಿಸುವಂತೆ ಮಾಡಿದ್ದರು ಎಂದು ಆರೋಪಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy