ನರಗುಂದ: ಯಾವುದೇ ರಾಜಕಾರಣಿಗಳು ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿದರೆ ವ್ಯವಸ್ಥಿತ ಹೋರಾಟ ಮಾಡಬೇಕಾಗುತ್ತದೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸಚಿವ ಸಿ.ಸಿ. ಪಾಟೀಲ ಅವರು ವಿಧಾನಸೌಧದಲ್ಲಿ ಕುಳಿತ ನಮ್ಮ ತೇಜೋವಧೆ ಸುದ್ದಿಗೋಷ್ಠಿ ನಡೆಸಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡಿದ್ದೆ. ಅದನ್ನು ಚರ್ಚೆಗೆ ಒಳಪಡಿಸಬೇಕಿತ್ತು. ನಮ್ಮ ಮಾತಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ನಮ್ಮ ಬಗ್ಗೆ ಸಚಿವ ಸಿ.ಸಿ. ಪಾಟೀಲ ಚರ್ಚೆ ಮಾಡಿದ್ದರಿಂದ ರೋಷ, ಹಠ ಮರೆತು ನ್ಯಾಯ ಕೇಳಲು ಬಂದಿದ್ದೆ. ಆದರೆ ಪೊಲೀಸರ ವಿನಂತಿ ಮೇರೆಗೆ ಇಲ್ಲಿಂದ ಮರಳಿ ನಿರ್ಗಮಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.
ಬುಧವಾರ ನರಗುಂದ ಸಚಿವರ ಮನೆ ಮುಂದೆ ಧರಣಿ ನಡೆಸಲು ಆಗಮಿಸಿದ್ದ ಶ್ರೀಗಳನ್ನು ತಾಲೂಕಿನ ಸರಹದ್ದು ಬಳಿ ಪೊಲೀಸರು ತಡೆದು ನಿಲ್ಲಿಸಿದ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರೊಬ್ಬರ ಜಮೀನೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು
ಶೀಘ್ರದಲ್ಲಿ ಮಠದ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು. ಶ್ರೀಗಳೊಂದಿಗೆ ಉಗರಗೋಳ, ಮಂಟೂರ, ಹೊಸೂರ, ದೊಡ್ಡವಾಡ, ಕುಂಟೋಜಿ, ಮಸವಿನಾಳ, ಜಮಖಂಡಿ, ಸಾರವಾಡ, ನರೇಂದ್ರ, ಹನಮನಳ್ಳಿ ಮುಂತಾದ ಶ್ರೀಗಳು, ಭಕ್ತರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


