ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರುತ್ತಾರೆ ವದಂತಿಗೆ ಪ್ರತಿಕ್ರಿಯಿಸಿದ ಅವರು ನಾನು ಯಾವ ಪಕ್ಷದ ಬಗ್ಗೆಯೂ ಆಲೋಚಿಸಿಲ್ಲ.ಯಾವುದಾದ್ರೂ ಪಕ್ಷಕ್ಕೆ ಸೇರಬೇಕು ಅನ್ನೋ ಉದ್ದೇಶವಿದೆ.ಮಂಡ್ಯದ ಜನ ಮತ್ತು ಮಂಡ್ಯದ ಅಭಿವೃದ್ಧಿ ಕಾಳಜಿ ಇರೋ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿ ಸುಮಲತಾ ಅಂಬರೀಶ್ ಮಂಡ್ಯದ ಜನರನ್ನೂ ಕೇಳದೇ ನಾನು ಏನೂ ತೀರ್ಮಾನ ಮಾಡಲ್ಲ. ಗೃಹಸಚಿವ ಅಮಿತ್ ಶಾ ಬರೋ ದಿನ ನಾನು ಮಂಡ್ಯದಲ್ಲೇ ಇರಲ್ಲ ಎಂದು ಹೇಳಿದ್ದಾರೆ.ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ ಕಾರಣದಿಂದ ಮುಖಂಡರಿಗೆ ಸಂಸದರ ನಿಧಿ ಬಗ್ಗೆ ತಿಳಿಸುತ್ತಿದ್ದೇನೆ.
ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದರ ಬಗ್ಗೆ ಬಹಿರಂಗವಾಗಿ ಹೇಳಲು ಸಾದ್ಯವಿಲ್ಲ. ಎಲ್ಲರೂ ಸ್ವತಂತ್ರರು, ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


