ತಿಪಟೂರು: ತೆಂಗುಕಲ್ಪತರು ನಾಡಿನ ಕೊಬ್ಬರಿ ಮಾರುಕಟ್ಟೆಯ ತೆಂಗು ಹಾಗೂ ತೆಂಗು ಉತ್ಪನ್ನಗಳ ಸಂಸ್ಕರಣ ಪ್ರಯೋಗಾಲಯ ಕುಡುಕರು ಅನೈತಿಕ ಚಟುವಟಿಕೆಗಳ ತಾಣವಾಗಿದೆ
ತುಮಕೂರು ವಿಶ್ವವಿದ್ಯಾನಿಯ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರಾರಂಭ ಮಾಡಿದ್ದ ತೆಂಗು ಹಾಗೂ ತೆಂಗಿನ ಉತ್ಪನ್ನಗಳ ಸಂಸ್ಕರಣ ಪ್ರಯೋಗಗಾಲಯ ಪ್ರಾರಂಭದಿಂದಲೂ ಗ್ರಹಣ ಹಿಡಿದಿದೆ .
ಕಲ್ಪತರು ನಾಡು ತಿಪಟೂರು ತುರುವೇಕೆರೆ ಚಿಕ್ಕನಾಯ್ಕನಹಳ್ಳಿ ಹಾಸನ ಸೇರಿದಂತೆ ರಾಜ್ಯದ ಹಲವಾರು ಭಾಗಗಳ ತೆಂಗು ಬೆಳೆಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ವಿಶ್ವವಿಖ್ಯಾತ ಒಣಕೊಬ್ಬರಿ ಮಾರುಕಟ್ಟೆಯನ್ನು ಸಹ ಹೊಂದಿದೆ
ಒಂದೆಡೆ ತೆಂಗಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ತೆಂಗಿನ ಮೌಲ್ಯವರ್ಧನೆಗಾಗಿ ಕ್ರಮವಹಿಸಬೇಕು ಎನ್ನುವ ಕೂಗು ತಿಪಟೂರಿನಲ್ಲಿ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತು. ಆದರೆ, ತುಮಕೂರು ವಿಶ್ವವಿದ್ಯಾನಿಲಯದ ತಿಪಟೂರು ಎಪಿಎಂಸಿ ಅವರಣದಲ್ಲಿ ಪ್ರಾರಂಭಿಸಿರುವ ತೆಂಗು ಹಾಗೂ ತೆಂಗು ಉತ್ಪನ್ನಗಳ ಸಂಸ್ಕರಣ ಪ್ರಯೋಗಾಲಯ ತಾಲ್ಲೂಕಿನ ತೆಂಗುಬೆಳೆಗಾರರಲ್ಲಿ ಹೊಸ ಬರವಸೆ ಉಂಟುಮಾಡಿತ್ತು.
ತೆಂಗು ಹಾಗೂ ತೆಂಗು ಉತ್ಪನ್ನಗಳ ಮೇಲೆ ಹೊಸ ಹೊಸ ಪ್ರಯೋಗ ನಡೆಯಬಹುದು ಎನ್ನುವ ಆಸೆ ಚಿಗುರೊಡೆಯುವಂತೆ ಮಾಡಿತ್ತು. ತುಮಕೂರು ವಿಶ್ವವಿದ್ಯಾನಿಲಯ ಆರಂಭಿಸಿದ ಪ್ರಯೋಗಾಲಯಕ್ಕೆ ತಿಪಟೂರು ಎಪಿಎಂಸಿ ಕಟ್ಟಡವನ್ನೂ ಸಹ ನೀಡಲಾಗಿದೆ. ಆದರೆ, ಪ್ರಾರಂಭವಾಗಿ ಹಲವಾರು ವರ್ಷಗಳು ಕಳೆಯುತ್ತಾ ಬಂದರು ಪ್ರಯೋಗಾಲಯ ಕಾರ್ಯಾರಂಭ ಮಾಡದೆ ಕುಡುಕರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದೆ.
ರಾತ್ರಿವೇಳೆ ಮದ್ಯಸೇವನೆ ಮಾಡುವ ಕುಡುಕರು, ಮದ್ಯದ ಬಾಟಲಿಗಳನ್ನ ಎಲ್ಲಂದರಲ್ಲಿ ಎಸೆದಿದ್ದು, ಪ್ರಯೋಗಾಯದ ತುಂಬ ಮದ್ಯದ ಬಾಟಲಿ ಹಾಗೂ ಕಾಂಡೋಮ್ ಗಳದ್ದೇ ಕಾರುಬಾರು ಎನ್ನುವಂತಾಗಿದೆ.
ಶಿಕ್ಷಣ ಸಚಿವರ ತವರಿನಲ್ಲಿ ರೈತರಿಗೆ ವರದಾನವಾಗಬೇಕಿದ್ದ ಪ್ರಯೋಗಾಲಯ ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5