ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಕೆ ಜಗನ್ನಾಥ್ , ಜಗತ್ತಿಗೆ ಬೆಳಕಾಗಿದ್ದ ಶ್ರೀ ಬಸವೇಶ್ವರರ ಮಾನವೀಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಸರ್ಕಾರಿ ಸೇವೆ ಮಾಡುವ ನಾವು ಕನಿಷ್ಠ ಸಮಸ್ಯೆಗಳನ್ನು ಒತ್ತು ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೆಳಕಾಗಬೇಕು ಎಂದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 889ನೇ ಶ್ರೀ ಬಸವೇಶ್ವರ ಜಯಂತೊತ್ಸವದಲ್ಲಿ ಮಾತನಾಡಿದ ಅವರು, ಜನರ ಸೇವೆಗಾಗಿ ನೇಮಕಗೊಂಡಿರುವ ನಾವುಗಳು ಶ್ರದ್ಧೆ, ಸಂಯಮ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪಾಪ ಪುಣ್ಯಗಳನ್ನು ತಮ್ಮ ಕಾಯಕದಲ್ಲೆ ಕಾಣಬಹುದು ಎಂದು ಸಲಹೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಗ್ರೇಡ್ -2 ತಹಸೀಲ್ದಾರ್ ಎಸ್.ಕೆ ಜಗನ್ನಾಥ್, ಸಿ.ಡಿ.ಪಿ.ಒ ಇಲಾಖಾ ಅಧಿಕಾರಿಗಳಾದ ಶ್ರೀ ಓಂಕಾರಪ್ಪ, ಬಿ.ಸಿ.ಎಂ. ಇಲಾಖೆಯ ಶ್ರೀಮತಿ ಜಲಜಾಕ್ಷಿ ರವರು, ಶಿರಸ್ತೇದಾರ್ ಶ್ರೀ ರವಿಕುಮಾರ್, ಪುನೀತ್, ಕೋದಂಡರಾಮು, ರವಿಶಂಕರ್, ಹಾಗೂ ಕಚೇರಿ ಸಿಬ್ಬಂದಿವರ್ಗದವರು ಹಾಜರಿದ್ದರು .
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5