ಸರಗೂರು: ತಾಲೂಕು ಪಂಚಾಯಿತಿ ಯಲ್ಲಿ ವಿಕಲಚೇತನರಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಟೈಲರಿಂಗ್ ಮೇಷನ್, ಸೊಲರ್ ಲೈಟ್, ವೀಲ್ ಚೇರ್ ತ್ರೀವಿಲ್ ಸೈಕಲ್ , ವಾಟರ್ ಬೇಡ್, MRಕೀಟ್ ನ್ನು ಶಾಸಕರಾದ ಅನಿಲ್ ಚಿಕ್ಕಮಾಧು ಅವರು ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸರಗೂರು ತಾಲೂಕು ಸಂಯೋಜಕರಾದ ಜವರಾಜು ಮಾತನಾಡಿ, ಶಾಸಕರಿಗೆ ಸ್ವಾಗತ ಕೋರಿ ಶೇಕಡಾ 5ರ ಅನುದಾನದಲ್ಲಿ ತಾಲೂಕು ಪಂಚಾಯಿತಿ ಯಿಂದ ವಿಕಲಚೇತನರಿಗೆ ಸಾಧನ ಸಲಕರಣೆ ಇಂದು ವಿತರಣೆ ಮಾಡಲಾಗಿದೆ ಹಾಗೂ UDID ಕಾರ್ಡ್ ಸರಗೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಅಪ್ಲೋಡ್ ಮಾಡುತ್ತಿಲ್ಲ ಇದರಿಂದ ವಿಕಲಚೇತನರ ಗೆ ತೊಂದರೆ ಆಗುತ್ತಿದೆ ತಕ್ಷಣವೇ ಶಾಸಕರು ಇದನ್ನು ಬಗೆಹರಿಸಬೇಕು ಎಂದರು.
ಶಾಸಕ ಅನೀಲ್ ಚಿಕ್ಕಮಾದು ಮಾತನಾಡಿ, ವಿಕಲಚೇತನರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನ ದಲ್ಲಿ ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ 5 ಬೈಕ್ ಗಳನ್ನು ವಿತರಣೆ ಮಾಡುತ್ತಿವಿ ಎಂದರು
ಈ ಸಂದರ್ಭದಲ್ಲಿ ಸರಗೂರು ತಾಲೂಕು ಪಂಚಾಯಿತಿ ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಜರಾಡ್, ತಾಲ್ಲೂಕು ಸಂಯೋಜಕರು ಜವರಾಜು, ಸೋಮೇಶ್, ಚಿನ್ನಪ್ಪ, ಬಸವರಾಜು, ಮಹದೇವಮೂರ್ತಿ, ಸಂತೋಷ ಹಾಗೂ ಎಲ್ಲಾ ಗ್ರಾಮೀಣದ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕು ಪಂಚಾಯಿತಿ ಎಲ್ಲಾ ಸಿಬ್ಬಂದಿ, ಫಲಾನುಭವಿಗಳು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


