ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 400 ಕೋಟಿ ರೂ ಬಿಡುಗಡೆ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಪಿಂಜಾರ ನದಾಫ್ ಜನಾಂಗದ ಅಧ್ಯಕ್ಷರಾದ ಅಬ್ದುಲ್ ಬಶೀರ್, ಸರ್ಕಾರದಿಂದ ಸುಮಾರು 25 ಜನಾಂಗದವರಿಗೆ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಆದರೆ ಈವರೆಗೆ ನಮ್ಮ ನದಾಫ್ ಪಿಂಜಾರ ಜನಾಂಗ ನಮ್ಮ ಜಿಲ್ಲೆಯಲ್ಲಿ ನೋಂದಣಿಯಾಗಿಲ್ಲ ಹಾಗೂ ನಮ್ಮ ನದಾಫ್ ಪಿಂಜಾರ ಜನಾಂಗಕ್ಕೆ ಸರ್ಟಿಫಿಕೇಟ್ ಕೊಡಿ ಎಂದರೆ ಮೂಲ ದಾಖಲಾತಿಗಳನ್ನು ಕೇಳುತ್ತಾರೆ ಎಂದರು.
ನಾವು ಪಿಂಜಾರ ನದಾಫ್ ಜಾತಿಯಾಗಿ ಸರ್ಕಾರದ ಅನುಕೂಲ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ಹಲವು ಬಾರಿ ತಂದರೂ ಸಹ ನಮಗೆ ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5