ಉತ್ತರಪ್ರದೇಶ: ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದ ವೇಳೆ 18 ವರ್ಷ ವಯಸ್ಸಿನ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಆರೋಪಿಗಳು ತನ್ನನ್ನು ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದರು. ನಂತರ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೇರೊಬ್ಬರೊಂದಿಗೆ ಇರುವಂತೆ ಒತ್ತಾಯಿಸಿದರು ಎಂದು ಯುವತಿ ಹೇಳಿಕೆ ನೀಡಿರುವುದಾಗಿ ಝಾನ್ಸಿ ಜಿಲ್ಲೆಯ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಎಪ್ರಿಲ್ 21 ರಂದು ನಡೆಯಲಿರುವ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಎಪ್ರಿಲ್ 18 ರಂದು ತನ್ನನ್ನು ಅಪಹರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5