ಹುಡುಗಿಗೆ ಮೆಸೆಜ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಗಣೇಶ ಎಂಬ ದಲಿತ ಯುವಕನು ಯುವತಿಗೆ ಮೆಸೇಜ್ ಮಾಡಿದ್ದ ಎಂದು ಆರೋಪಿಸಿ ಗ್ರಾಮ ಗ್ರಾ.ಪಂ ಸದಸ್ಯ ಬಾಬಣ್ಣ, ಕಾರ್ತೀಕ್ ಹಾಗೂ ಹರೀಶ್ ಸೇರಿ ಅರವತ್ತಕ್ಕೂ ಹೆಚ್ಚು ಜನ ಸವರ್ಣೀಯರು ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಯುವಕನಿಗೆ ಎರಡು ದಿನಗಳ ಕಾಲ ಚಿತ್ರ ಹಿಂಸೆ ನೀಡಿ, ಅರೇ ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ಹಲ್ಲೆಯಿಂದ ತೀವ್ರಗಾಯಗೊಂಡ ದಲಿತ ಯುವಕನಿಗೆ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಲಿತ ಯುವಕ ಗಣೇಶನನ್ನು ಹಾಗೂ ಆತನ ತಾಯಿಯನ್ನು ಎರಡು ದಿನಗಳ ಕಾಲ ಕಲ್ಯಾಣ ಮಂಟಪದಲ್ಲಿ ಕೂಡಿ ಹಾಕಿ ಹಿಂಸಿಸಲಾಗಿದೆ ಈ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕನ ಸಂಬಂಧಿಕರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


