ಹಿರಿಯೂರು: ಹಾವುಗಳು ಎಂದಾಕ್ಷಣ ಮಾರುದ್ದ ಓಡುವವರೇ ಹೆಚ್ಚು. ಇಂತಹವರ ಮಧ್ಯೆ ಚಿತ್ರದುರ್ಗ ನಗರದಲ್ಲಿ ಮಹಾನಾಯಕ ವಾರಪತ್ರಿಕೆ ಸಂಪಾದಕರಾಗಿ ಪತ್ರಿಕೆ ನಡೆಸುತ್ತಿರುವ ವ್ಯಕ್ತಿಯೊಬ್ಬರು ಯಾವ ಭಯವೂ ಇಲ್ಲದೆ 100ಕ್ಕೂ ಅಧಿಕ ವಿಷದ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ..
ಚಾಕಚಕ್ಯತೆಯಿಂದ ಹಾವುಗಳನ್ನು ಹಿಡಿಯುವ ಇವರ ಧೈರ್ಯ, ಸಾಹಸಕ್ಕೆ ನಿಬ್ಬೆರಗಾಗಲೇಬೇಕು. ಚಿತ್ರದುರ್ಗ ನಗರದಲ್ಲಿ ವಾರಪತ್ರಿಕೆ ನಡೆಸುತ್ತಿರುವಂತಹ ಶಿವಕುಮಾರ್ ಅವರೇ ಈ ರೀತಿ ಸಾಧನೆ ಮಾಡುತ್ತಿರುವವರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಪುರ ಸೇರಿದಂತೆ ಎಲ್ಲೇ ವಿಷದ ಹಾವು ಇರುವ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಆ ಪ್ರದೇಶಕ್ಕೆ ತೆರಳಿ ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ. ಕನ್ನಡಿ ಹಾವು, ಹೆಬ್ಬಾವು, ಕೆರೆ ಹಾವು, ನೀರು ಹಾವು ಸೇರಿದಂತೆ ನಾನಾ ಜಾತಿಯ ಹಾವುಗಳನ್ನು ಪಳಗಿಸಿದ ಹೆಗ್ಗಳಿಕೆ ಇವರದು. ವಾಣಿವಿಲಾಸಪುರ ಗ್ರಾಮದ ಜಮೀನಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು ಆರು ಅಡಿ ಉದ್ದದ ಕೆರೆ ಹಾವನ್ನು ರಕ್ಷಣೆ ಮಾಡಿದ ಶಿವಕುಮಾರ್ ಅವರು, ಹಾವನ್ನು ರಕ್ಷಿಸಿ ಎಂಬ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರಿಗೆ ರಾಜು , ಸಿದ್ದೇಶ್ ಕಿರಣ್ ರವರು ಸಹಕಾರ ನೀಡಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5