ಧಾರವಾಡದ ಭೀಕರ ಅಪಘಾತ ಮರೆಯಾಗುವ ಮೊದಲೇ ಹುಬ್ಬಳ್ಳಿ ನಗರದ ಹೊರವಲಯದ ರೇವಡಿಹಾಳ ಕ್ರಾಸ್ ಮೇಲ್ಸೇತುವೆ ಬಳಿ ಖಾಸಗಿ ಬಸ್ ಮತ್ತು ಅಕ್ಕಿ ಚೀಲ ಹೇರಿಕೊಂಡು ಹೊರಟಿದ್ದ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು, 8 ಮಂದಿ ಸಾವಿಗೀಡಾಗಿದ್ದಾರೆ.
ಬಸ್ ಚಾಲಕನು ಟ್ರ್ಯಾಕ್ಟರ್ ಹಿಂದಿಕ್ಕಿ ಮುಂದೆ ಸಾಗುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜ, ಪ್ರಯಾಣಿಕರಾದ ಇಚಲಕರಂಜಿಯ ಬಾಬಾಸಾ ಅಣ್ಣಾಸಾ ಚೌಗಲೆ, ಚಿಕ್ಕೋಡಿಯ ಬಾಬೂಸಾಬ ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರೆಲ್ಲ ಬಹುತೇಕರೆಲ್ಲ ಬಸ್ಸಿನ ಪ್ರಯಾಣಿಕರಾಗಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5