ಚಿತ್ತದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಶ್ರೀಶೈಲ ಸರ್ಕಲ್ ಗೆ ಹೋಗುವ ರಸ್ತೆ ಬದಿಯಲ್ಲಿರುವ ಮತ್ತು ಕೆ ಎಮ್ ಕೊಟ್ಟಿಗೆಯ ಹಳೇ ವಾಲ್ಮಿಕಿ ಭವನದ ಬಳಿ ಇರುವಂತಹ ವಿದ್ಯುತ್ ಟಿಸಿ ಸುತ್ತಮುತ್ತ ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ಸಾರ್ವಜನಿಕರ ಪ್ರಾಣದ ಜೊತೆಗೆ ಚೆಲ್ಲಾಟವಾಡು್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ರಸ್ತೆ ಬದಿ ಇರುವ ಟಿಸಿ ಕೈಗೆಟಕುವ ಅಂತರದಲ್ಲಿದೆ. ಸಾರ್ವಜನಿಕರು ಸ್ವಲ್ಪ ಮೈಮರೆತು ಮುಟ್ಟಿದರೂ, ಅನಾಹುತವೇ ನಡೆದುಹೋಗಬಹುದು. ವಿದ್ಯಾರ್ಥಿಗಳು, ಪುಟ್ಟ ಮಕ್ಕಳು ಕಂಬವನ್ನು ಸ್ಪರ್ಶಿಸಿದರೆ, ಅವರ ಪ್ರಾಣಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಹಿರಿಯೂರು ತಾಲೂಕಿನಲ್ಲಿ ಈ ರೀತಿಯ ಟಿಸಿಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ. ಸಾರ್ವಜನಿಕರ ಸುರಕ್ಷತೆಗೆ ಕಿಂಚಿತ್ತೂ ಗಮನ ಹರಿಸಲಾಗಿಲ್ಲ. ಟಿಸಿಯ ಸಮೀಪದಲ್ಲೇ ಗಿಡಗಳು ಬೆಳೆದಿವೆ. ಆಕಸ್ಮತ್ ವಿದ್ಯುತ್ ಗಿಡಗಳಿಗೆ ಸ್ಪರ್ಶಿಸಿದರೆ, ಅದನ್ನು ಜನರೋ, ಪ್ರಾಣಿಗಳೋ ಸ್ಪರ್ಶಿಸಿದರೆ, ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ.
ಟಿಸಿಗಳ ಸುತ್ತಮುತ್ತ ಜನರು ಹೋಗದಂತೆ ಸುರಕ್ಷತೆ ಕ್ರಮವನ್ನು ಸಂಬಂಧಪಟ್ಟವರು ಅಳವಡಿಸಬೇಕು. ಈ ಬಗ್ಗೆ ಸ್ಥಳೀಯ ಶಾಸಕರು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ಇಂತಹ ಸಮಸ್ಯೆಗಳನ್ನು ಕಂಡೂ ಕಾಣದಂತಿರುವುದು ಖಂಡನೀಯ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5