ಗಾಯಕ-ರಾಪರ್ ಸಿಧು ಮೂಸೆವಾಲಾ ಹತ್ಯೆಯ ಬಳಿಕ ಜೀವ ಬೆದರಿಕೆ ಎದುರಿಸುತ್ತಿರುವ 434 ಮಂದಿಗೆ ಜೂನ್ 7 ರ ಒಳಗೆ ಭದ್ರತೆ ಮರು ನಿಯೋಜಿಸುವುದಾಗಿ ಹರಿಯಾಣ ಹೈಕೋರ್ಟ್ ಗೆ ಪಂಜಾಬ್ ರಾಜ್ಯ ಸರ್ಕಾರ ಈ ವಿಷಯ ತಿಳಿಸಿದೆ.
ಕಳೆದ ವಾರ ಮೂಸೆವಾಲ ಸೇರಿದಂತೆ ಹಲವರ ಭದ್ರತೆ ಹಿಂತೆಗೆಕೊಳ್ಳಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಗಾಯಕ ಸಿಧು ಮೂಸೆವಾಲ ಹತ್ಯೆ ಮಾಡಲಾಗಿತ್ತು. ಇದರಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರದ ಭದ್ರತೆ ಹಿಂತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ, ಔಪಚಾರಿಕ ಹೇಳಿಕೆ ನೀಡಿದೆ.
ಗಾಯಕ ಮೂಸ್ ವಾಲಾ ಭದ್ರತೆ ಹಿಂತೆಗೆದುಕೊಂಡ ಒಂದು ದಿನದ ನಂತರ, ಮೇ ೨೯ ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ತನ್ನ ವಾಹನದಲ್ಲಿ ಹೋಗುತ್ತಿದ್ದಾಗ ಮೂಸೆವಾಲ ಅವರ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಮೂಸ್ ವಾಲಾ ಹತ್ಯೆಗೆ ಅನೇಕರಿಂದ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ, ನ್ಯಾಯಾಲಯದಲ್ಲಿ ೪೦೦ ಮಂದಿಗೆ ನೀಡಿದ್ದ ಭದ್ರತೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿರುವ ಕ್ರಮವನ್ನು ಬಲವಾಗಿ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿತ್ತು. ಆ ಬಳಿಕ ಜೂನ್ ೭ ರ ಒಳಗೆ ಭದ್ರತೆಯನ್ನು ನೀಡುವುದಾಗಿ ತಿಳಿಸಿದೆ.
ಸರ್ಕಾರದ ಕ್ರಮವನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರದ ಕಾನೂನು ಅಧಿಕಾರಿ, ವಕೀಲ ಗೌರವ್ ಗರ್ಗ್ ಧುರಿವಾಲಾ ಅವರು ನ್ಯಾಯಮೂರ್ತಿ ರಾಜ್ ಮೋಹನ್ ಸಿಂಗ್ ಅವರ ಪೀಠಕ್ಕೆ ಸಲ್ಲಿಸಿದೆ. ಜೊತೆಗೆ ಯಾವುದೇ ಕಾರಣಕ್ಕಾಗಿ ಭದ್ರತೆಯನ್ನು ಹಿಂತೆಗೆದುಕೊಳ್ಳಲಾದ ಜನರ ಪಟ್ಟಿಯ “ಸಾರ್ವಜನಿಕವಾಗಿ ಪ್ರಸಾರ ಮಾಡದಂತಯೂ ನ್ಯಾಯಾಲಯಕ್ಕೆ ಮನವಿ ಮಾಡಿದೆ.
1992 ರಿಂದ 2022 ರವರೆಗೆ ಶಾಸಕರಾಗಿದ್ದ ಸೋನಿ, 184 ಮಾಜಿ ಮಂತ್ರಿಗಳು ಮತ್ತು ಶಾಸಕರ ಭದ್ರತೆಯನ್ನು ಜೀವ ಬೆದರಿಕೆ ಗ್ರಹಿಕೆಗಿಂತ ಹೆಚ್ಚಾಗಿ “ಪಿಕ್ ಮತ್ತು ಚೂಸ್ ಆಧಾರದ ಮೇಲೆ” ಹಿಂಪಡೆಯಲಾಗಿದೆ ಎಂದು ಆರೋಪಿಸಿದ್ದರು.
ವರದಿ: ಅಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5