ಚೀನಾದ ಪುರಾತತ್ವ ಶಾಸ್ತ್ರಜ್ಞರು ಸುಮಾರು 13,000 ಕಲಾಕೃತಿಗಳ ಪುರಾತನ ನಿಧಿ ಪತ್ತೆ ಹಚ್ಚಿದ್ದು, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪತ್ತೆಯಾದ ಕನಿಷ್ಠ ಹತ್ತು ಕಂಚಿನ ಸಾಮಾನು ಒಳಗೊಂಡಂತೆ ಸೊಗಸಾದ ಕಂಚು, ಚಿನ್ನ ಮತ್ತು ಪಚ್ಚೆಹರಳು ಸಾಮಾನುಗಳು ಪುರಾತತ್ವ ಶಾಸ್ತ್ರಜ್ಞರನ್ನು ಬೆರಗುಗೊಳಿಸಿದೆ.
ಇದು 3,000 ದಿಂದ 4,500 ವರ್ಷಗಳಷ್ಟು ಹಿಂದಿನ ನಿಗೂಢ ಸಾಮ್ರಜ್ಯವೆಂದು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೊದಲಿಗೆ ಇದನ್ನು 1920ರ ದಶಕದ ಅಂತ್ಯದಲ್ಲಿ ಪತ್ತೆಹಚ್ಚಲಾಗಿತ್ತು.
ಅವಶೇಷಗಳನ್ನು 20ನೇ ಶತಮಾನದ ವಿಶ್ವದ ಶ್ರೇಷ್ಠ ಪುರಾತತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಒಂದು ಎಂದು ಹೆಸರಿಸಲಾಗಿದೆ. ಪುರಾತನ ಕಾಲದ ಸಾಂಸ್ಕೃತಿಕ ಅವಶೇಷಗಳನ್ನು ಪುರಾತತ್ವ ಶಾಸ್ತ್ರಜ್ಞರು ಈ ಸ್ಥಳದಲ್ಲಿ ಪತ್ತೆ ಹಚ್ಚಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz