ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದಲ್ಲಿನ ಸಂತೇಪೇಟೆಯಲ್ಲಿರುವ ವಿನಾಯಕ ರೋಟರಿ ಆಯಿಲ್ ಮಿಲ್ ಮೂವತ್ತು ನಲವತ್ತು ವರ್ಷಗಳಿಂದ ನಡೆಸುತ್ತಿದ್ದರೂ, ಯಾವುದೇ ಪರವಾನಿಗೆ ಪಡೆಯದೇ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ಇದೇ ಆಯಿಲ್ ಮಿಲ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ಲಕ್ಷ್ಮಕ್ಕ ನವರು ಕೆಲಸ ಮಾಡಿಕೊಂಡು ಬರುತ್ತಿದ್ದ ಮಹಿಳೆಯು ಆಯಿಲ್ ಮಿಲ್ ನ ಮಿಷನ್ ನ ಯಂತ್ರಕ್ಕೆ ಲಕ್ಷ್ಮಕ್ಕ ನವರ ಕೈ ಸಿಕ್ಕಿಕೊಂಡು ಕೈ ತುಂಡಾಗಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಲಕ್ಷ್ಮಕ್ಕರವರು, ಈ ಅಪಘಾತಕ್ಕೆ ಆಯಿಲ್ ಮಿಲ್ ನ ಮಾಲಿಕನ ನಿರ್ಲಕ್ಷ್ಯತನವೇ ಕಾರಣ ಎಂದು ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಐ ಪಿ ಸಿ ಸೆಕ್ಸನ್ 287 ಮತ್ತು ಐ ಪಿ ಸಿ ಸೆಕ್ಸನ್ 338 ರಂತೆ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ವಿನಾಯಕ ರೋಟರಿ ಆಯಿಲ್ ಮಿಲ್ ನ ಮಾಲಿಕನ ಮೇಲೆ ಕೇಸ್ ದಾಖಲಾಗಿತ್ತು.
ವಿನಾಯಕ ರೋಟರಿ ಆಯಿಲ್ ಮಿಲ್ ಮೂವತ್ತು ನಲವತ್ತು ವರ್ಷಗಳಿಂದ ನಡೆಸುತ್ತಿದ್ದರೂ, ಈ ಮಿಲ್ ಗೆ ಇಂದಿಗೂ ಸರ್ಕಾರದಿಂದ ಯಾವುದೇ ಪರವಾನಿಗೆಯ ಮಾನ್ಯತೆ ಆಗಲಿ ಹೊಂದಿರುವುದಿಲ್ಲ ವೆಂಬುದು ಇದೀಗ ಬೆಳಕಿಗೆ ಬಂದಿದೆ . ಯಾವುದೇ ಪರವಾನಿಗೆ ಪಡೆಯದೆ ನಡೆಸುತ್ತಿರುವ ಈ ಮಿಲ್ ನಲ್ಲಿ ದುಡಿಯುತ್ತಿರುವ ಅಮಾಯಕ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಮಿಲ್ ನಲ್ಲಿ ನಡೆಯುತ್ತಿರುವ ಅಪಾಯಕಾರಿ ಘಟನೆಗಳಿಂದ ಕೈ ಕಾಲುಗಳನ್ನು ಕಳೆದುಕೊಳ್ಳುವಂತಾಗಿದೆ.
ಮಿಲ್ ಗೆ ಸಂಬಂಧ ಪಟ್ಟಂತೆ ಸ್ಥಳೀಯ ಆಡಳಿತ ಅಧಿಕಾರಿಗಳು, ನಗರ ಸಭೆ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಯಾವುದೇ ರೀತಿಯ ಕ್ರಮವನ್ನು ವಹಿಸದಿರುವುದು ಅಚ್ಚರಿಗೆ ಕಾರಣವಾಗಿದ್ದು, ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಪ್ರತಿನಿಧಿ ವಿನಾಯಕ ರೋಟರಿ ಆಯಿಲ್ ಮಿಲ್ ಗೆ ಭೇಟಿ ನೀಡಿದ ವೇಳೆ ಆಯಿಲ್ ಮಿಲ್ ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯನ್ನು ವಿಚಾರಿಸಿದಾಗ , ನಾನು ಇಲ್ಲಿ ಸುಮಾರು ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಮಗೆ ಇಲ್ಲಿ ದಿನದ 400 ರೂಪಾಯಿ ಕೂಲಿ ಬಿಟ್ಟರೆ, ಬೇರೆ ಯಾವುದೆ ತರಹದ ಸೌಲಭ್ಯಗಳಿಲ್ಲ. ಕಾರ್ಮಿಕರ ಕಟ್ಟಡ ಇಲಾಖೆಯಲ್ಲಿ ನೋಂದಾಣಿ ಮಾಡಿಸಿಲ್ಲ, ಇಲ್ಲಿ ಕೆಲಸ ಮಾಡುತ್ತಿರುವ ನಮಗೆ ಯಾವುದೇ ಇನ್ಸೂರೆನ್ಸ್ ಪಾಲಿಸಿ ಯಾವುದೇ ತರಹದ ಸೌಲಭ್ಯಗಳು ಸಹ ಇಲ್ಲ ಎಂದು ತಿಳಿಸಿದರು.
ಲೈಸೆನ್ಸ್ ಇಲ್ಲದೇ ನಡೆಸುತ್ತಿರುವ ಮಿಲ್ ನಲ್ಲಿ ಇನ್ನೇನು ಇರಲು ಸಾಧ್ಯ? ಮಿಲ್ ನಲ್ಲಿ ಕಾರ್ಮಿಕರ ಕೈಕಾಲುಗಳು ಊನಗೊಂಡರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಮೇಲಾಧಿಕಾರಿಗಳು ಇದನ್ನು ಕಂಡೂ ಕಾಣದಂತಿದ್ದಾರೆ. ಈ ಆಯಿಲ್ ಮಿಲ್ ನಲ್ಲಿ ವಿದ್ಯುತ್ ಪ್ರತಿಯೊಂದು ಸ್ವಿಚ್ ಬೋರ್ಡ್ ಗಳು ಹಳೆಯ ಬೋರ್ಡ್ ಗಳಂತೆ ಕಂಡು ಬಂದಿದ್ದು, ಕಾರ್ಮಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನಾದರೂ ನಿದ್ರಿಸುತ್ತಿರುವಂತೆ ನಟಿಸುತ್ತಿರುವ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


