ತಿಪಟೂರು: ಪಠ್ಯಪುಸ್ತಕವನ್ನು ಸಮಾಲೋಚನೆ ನಡೆಸದೆ ಪರಿಷ್ಕರಿಸಿದ ಸರಕಾರದ ನಡೆ ಮತ್ತು ಆರೆಸ್ಸೆಸ್ ವಿಚಾರಧಾರೆಗಳ ವಿರುದ್ಧ ಚಡ್ಡಿ ಸುಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದ್ದಾರೆ.
ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್ ವಿಚಾರಧಾರೆಗಳನ್ನು ವಿರೋಧಿಸುವುದು ನಮ್ಮ ಉದ್ದೇಶವಾಗಿತ್ತು. ನಾವು ಶಿಕ್ಷಣ ಸಚಿವರ ಗೃಹ ಕಚೇರಿ ಎದುರು ಪ್ರತಿಭಟನೆ ಶುರು ಮಾಡಿ, ಅರ್ಧ ಗಂಟೆ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಗೃಹಸಚಿವರು ಆಪಾದಿಸಿರುವ ಅಂತೆ ನಮಗೆ ಸಚಿವರ ಮನೆಗೆ ಬೆಂಕಿ ಹಚ್ಚುವ ಉದ್ದೇಶವಿದ್ದರೆ ಪೊಲೀಸರು ಬರುವವರೆಗೂ ನಾವು ಕಾಯಬೇಕಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ವಿನಾಕಾರಣ ನಮ್ಮ ವಿರುದ್ಧ ಸ್ಪೋಟಕ ಕಾಯ್ದೆಯಂತಹ ಕಠಿಣ ಕಾಯ್ದೆ ದಾಖಲಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಇನ್ನುಮುಂದೆ ಆರೆಸ್ಸೆಸ್ ವಿಚಾರಧಾರೆಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.
ತಾಲೂಕು ಅಧ್ಯಕ್ಷ ಹೇಮಂತ್ , ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು, ಕೆಪಿಸಿಸಿ ಸದಸ್ಯ ಯೋಗೀಶ್, ಮುಖಂಡ ಸುನಿಲ್ ಮೇಘಲ ಮನೆ ಇದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz