ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಬಸವರಾಜ್ ಆಸ್ಪತ್ರೆ ರಸ್ತೆಯ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಸಾಯಿಬಾಬಾ ಸ್ವಾಮಿಗೆ ವಾರದ ಪ್ರಯುಕ್ತ ಭಕ್ತಾದಿಗಳಿಂದ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಸಹ ಬಹಳ ವಿಜೃಂಭಣೆಯಿಂದ ನಡೆಯಿತು.
ಇದೇ ಸಂದರ್ಭದಲ್ಲಿ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಭಕ್ತಾದಿಗಳು ಸಾಯಿಬಾಬಾ ಅವರ ಮಹಿಮೆಗಳು ಹಾಗೂ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ವಿವರಿಸಿ, ಸ್ವಾಮಿಯ ಮಹಿಮೆಗೆ ಅಚ್ಚರಿ ವ್ಯಕ್ತಪಡಿಸಿದರು.
ಹಿರಿಯೂರು ನಗರದಲ್ಲಿರುವ ಈ ಸಾಯಿಬಾಬಾ ದರ್ಶನ ಪಡೆಯಲು ಸಾವಿರಾರು ಜನ ಈ ದೇವಾಲಯಕ್ಕೆ ಶ್ರೀ ಸಾಯಿಬಾಬಾನ ದರ್ಶನ ಪಡೆಯಲು ದಿನನಿತ್ಯವು ಸಹ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ನಾನಾ ಕಡೆಗಳಿಂದಲೂ ಸಹ ಭಕ್ತಾದಿಗಳು ಆಗಮಿಸುತ್ತಾರೆ ಎಂದು ಇಲ್ಲಿನ ಮಹಿಮೆಗಳನ್ನು ಭಕ್ತರು ಕೊಂಡಾಡಿದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


