ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಬರಗೂರು ರಾಮಚಂದ್ರಪ್ಪನವರು 150 ತಪ್ಪುಗಳನ್ನು 169 ಪೇಜ್ ಗಳಲ್ಲಿ ಮಾಡಿದ್ರು. ನಮ್ಮ ಕಾಲ ದಲ್ಲಿ ಕೇವಲ 17 ತಪ್ಪುಗಳಾಗಿವೆ ಅದನ್ನು ಸರಿಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ತುಮಕೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಹೆಸರು ಬದಲಾವಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಾ, ಎನ್.ಇ.ಪಿ ಪ್ರಕಾರ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್ ಪಠ್ಯಪುಸ್ತಕ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರಸ್ವತಿಯನ್ನ ಹರಿದು ಹಾಕುವ ಸಂಸ್ಕ್ರತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ತಕೊಂಡು ನಮಸ್ಕಾರ ಮಾಡ್ತಿವಿ. ಡಿ.ಕೆ.ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದ್ಕೆ ನಾವೇನು ಮಾಡೋಕ್ಕಾಗಲ್ಲ ಎಂದ ಅವರು, ಈಗಾಗಲೆ 75 % ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದು ಇದೇ ವೇಳೆ ತಿಳಿಸಿದರು.
ದೇವೇಗೌಡರ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದೇವೆಗೌಡರು ಹಿರಿಯರು, ಗೌರವಾನ್ವಿತರು. ಅವರ ಮನೆಗೆ ಹೋಗಿ ಎಲ್ಲಾ ತಿಳಿಸಿ ಬಂದಿದ್ದೇನೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂದು ನನಗೆ ವಿಶ್ವಾಸವಿದೆ ಎಂದರು.
ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೊ ಹೇಳಿ ಬಿಟ್ಟಿದ್ದರು. ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ ಎಂದು ಹೇಳಿದರು.
ರೋಹಿತ್ ಚಕ್ರತೀರ್ಥ ವಿರುದ್ದ ದೂರು ದಾಖಲಾಗಿದ್ದು 2017ರಲ್ಲಿ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಡಿ.ಕೆ.ಶಿವಕುಮಾರ್ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ರೆ, ಆವತ್ತೇ ಕ್ರಮಕೈಗೊಳ್ಳಬೇಕಿತ್ತು. ಪ್ರಕರಣದ ಕುರಿತಂತೆ ಸರ್ಕಾರ ಬಿ ರೀಪೋರ್ಟ್ ಹಾಕಿತ್ತು. ಈ ಎಲ್ಲಾ ವಿಚಾರವನ್ನು ದೇವೆಗೌಡರಿಗೆ ತಿಳಿಸಿ ಬಂದಿದ್ದೇನೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz