ಪೋಷಕರಿಂದ ದೂರವಾಗಿ ಅಲೆಯುತ್ತಿದ್ದ ಬಾಲಕನನ್ನು ಪುನಃ ಪೋಷಕರ ಮಡಿಲಿಗೆ ಸೇರಿಸುವ ಮೂಲಕ ನಗರದ ಯುವಕರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ ಬಳಿ ಹಸಿವಿನಿಂದ ಓಡಾಡುತ್ತಿದ್ದ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕನನ್ನು ಸ್ಥಳೀಯ ಬೇಕರಿ ಮಾಲೀಕ ರಾಜಣ್ಣ, ಯುವಕರಾದ ನಿತಿನ್ ಹಾಗೂ ಶ್ರೀಧರ್ ಗಮನಿಸಿ ವಿಚಾರಿಸಿದ್ದಾರೆ.
ಹಿಂದಿ ಭಾಷೆ ಮಾತನಾಡುತ್ತಿದ್ದ ಬಾಲಕನಿಗೆ ಊರಿನ ಹೆಸರು ಮರೆತಿತ್ತು. ಆದರೆ, ಬಾಲಕ ಸುಹಾಸ್ ಹೇಳಿದ್ದ ಅಣ್ಣನ ಹೆಸರನ್ನ ಫೇಸ್ ಬುಕ್‌ನಲ್ಲಿ ಹುಡುಕಾಡಿದಾಗ ಪಶ್ಚಿಮ ಬಂಗಾಳದಲ್ಲಿರುವ ತನ್ನ ಅಣ್ಣನ ಫೋಟೋವನ್ನ ಗುರುತಿಸಿದ್ದ. ಕೂಡಲೇ ಮೆಸೆಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ್ದಾರೆ.
ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. ಒಂದು ವಾರದ ಬಳಿಕ ಸುಹಾಸ್ ಪೋಷಕರು ನಗರಕ್ಕೆ ಬಂದು ಮಗನನ್ನ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ.
ಒಂದು ವರ್ಷದ ಹಿಂದೆ ಊರಿನ ಬಳಿ ಕಣ್ಣಾ ಮುಚ್ಚಾಲೆ ಆಟವಾಡುವಾಗ ಗೂಡ್ಸ್ ರೈಲು ಹತ್ತಿದ್ದ ಬಾಲಕ ದಿಕ್ಕು ತೋಚದೇ ಊರೂರು ಅಲೆದು ಕೊನೆಗೆ ನಗರಕ್ಕೆ ಬಂದು ಸೇರಿದ್ದ. ವರ್ಷದ ಬಳಿಕ ಯುವಕರ ಸಹಾಯದಿಂದ ತಾಯಿಯ ಮಡಿಲು ಸೇರಿದ್ದಾನೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz