ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಮೀನುಗಾರು ಅಪರೂಪದ ಬೃಹತ್ “ಟೆಲಿಯಾ ಭೋಲಾ” ಮೀನನ್ನು ಸೆರೆ ಹಿಡಿದಿದ್ದು, ಈ ಮೀನು ಸುಮಾರು 55 ಕೆಜಿ ತೂಕ ಹೊಂದಿದೆ.
ಮೀನನ್ನು ಹರಾಜಿನಲ್ಲಿ ಕಂಪನಿಯೊಂದು ಪ್ರತಿ ಕೆಜಿಗೆ 26 ಸಾವಿರ ರೂಪಾಯಿಗೆ ಖರೀದಿಸಿದೆ. ಈ ಮೀನು ಒಟ್ಟು 13 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಟೆಲಿಯಾ ಭೋಲಾ ಮೀನಿನ ವೈಶಿಷ್ಟ್ಯವೆಂದರೆ ಅದು ಬಹಳಷ್ಟು ಮಾವ್ (Maw) ಅನ್ನು ಹೊಂದಿರುತ್ತದೆ, ಇದರಿಂದ ಔಷಧಿಗಳನ್ನು ತಯಾರಿಸಲಾಗುತ್ತದೆ. ವರದಿಗಳ ಪ್ರಕಾರ ಈ ಮೀನಿನ ಮಾವನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತದೆ.
ಈ ಮೀನನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಮೀನಿನ ಒಟ್ಟು ತೂಕ 55 ಕೆ.ಜಿ ಇದ್ದು 5 ಕೆಜಿ ಮೊಟ್ಟೆಗಳನ್ನು ಹೊರತುಪಡಿಸಿದರೇ, ಮೀನಿನ ಒಟ್ಟು ತೂಕ 50 ಕೆ.ಜಿ. ಇದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz