ಚಿತ್ರದುರ್ಗ: ಚಿಕ್ಕಜಾಜೂರುನಿಂದ ಕಡೂರುಗೆ ಹೋಗುವ ಮಾರ್ಗಮದ್ಯೆ ಎರಡು ಕಿರಿದಾದ ಸೇತುವೆ ಇದ್ದು ಅಪಘಾತಗಳು ಹೆಚ್ಚಿನದಾಗಿ ಸಂಭವಿಸುತಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಈ ಕೂಡಲೇ ರಸ್ತೆ ಅಗಲೀಕರಣ ಮಾಡಬೇಕೆಂದು ಅಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿತು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಆರ್.ಕೋದಂಡರಾಮ್ ಅವರ ಮಾರ್ಗದರ್ಶನದಲ್ಲಿ ಪ್ರತಿಭಟನೆ ನಡೆಸಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂರ್ಭದಲ್ಲಿ ರಾಜ್ಯಕಾರ್ಯದರ್ಶಿಗಳು ಹಾಗೂ ಜಿಲ್ಲಾಧ್ಯಕ್ಷರಾದ ರಾಮಚಂದ್ರ ಕೆ., ಹೊಳಲ್ಕೆರೆ ತಾಲೂಕು ಅಧ್ಯಕ್ಷರಾದ ಕೆ.ಎನ್.ತಿಪ್ಪೇಶ್, ಹಿರಿಯೂರು ತಾಲೂಕು ಕಾರ್ಯಧ್ಯಕ್ಷರಾದ ರಾಘವೇಂದ್ರ ಆರ್. ಹಾಗೂ ಪದಾಧಿಕಾರಿಗಳಾದ ಶ್ರೀಧರ್, ಸುನೀಲ್, ಮಂಜುನಾಥ್, ರಂಗಸ್ವಾಮಿ, ಆಕಾಶ್, ಸ್ವಾಮಿ, ರಘು, ಲಿಂಗರಾಜು, ಸ್ವಾಮಿ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


