ತುಮಕೂರು: ಕೆ.ಎನ್.ರಾಜಣ್ಣ ಮಧುಗಿರಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಬಗ್ಗೆ ಬಹಳ ಹಗುರವಾಗಿ, ಅನಾಗರಿಕವಾಗಿ, ಮಾತನಾಡಿದ್ದಾರೆ. ಪ್ರತಿಯೊಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯೋದು ಸರ್ವೇ ಸಾಮಾನ್ಯ. ಇನ್ನೊಬ್ಬರ ಸಾವನ್ನ ನಾವು ನಿರ್ಧಾರ ಮಾಡಬಾರ್ದು ಎಂದು ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ ಹೇಳಿಕೆ ನೀಡಿದ್ದಾರೆ.
ಒಬ್ಬ ಸಿನಿಯರ್ ಪೊಲಿಟಿಸಿಯನ್, ಆಗಿ ಕೆ.ಎನ್ .ರಾಜಣ್ಣ ದೇವಗೌಡರ ಬಗ್ಗೆ ಈ ರೀತಿಯಾಗಿ ಮಾತನಾಡಬಾರದಿತ್ತು. ಇವತ್ತು ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ ಅವರೇ ನಮ್ಮ ದೇಶಕ್ಕೆ ದೇವೆಗೌಡರಂತಹ ನಾಯಕರು ಬೇಕು ಅಂತಾರೆ. AICC ಕೂಡ ಗೈಡ್ ಲೈನ್ ಮಾಡಿದೆ. ದೇವೇಗೌಡರ ಕುಟುಂಬವನ್ನ ಟಾರ್ಗೆಟ್ ಮಾಡಬೇಡಿ, ಅದರಿಂದ ಪಕ್ಷಕ್ಕೆ ಆಗುವ ಲಾಭ ಏನು ಇಲ್ಲ, ಅದರಿಂದ ನಷ್ಟವೇ ಜಾಸ್ತಿ ಅಂತಾ ಹೇಳಿದೆ. ರಾಜಣ್ಣ ಅವ್ರು ಕಾಂಗ್ರೆಸ್ ಗೆ ಲಾಭ ಆಗ್ಬಾರ್ದು, ನಷ್ಟ ಆಗಬೇಕು ಅಂತಲೇ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.
ಚುನಾವಣೆಯಲ್ಲಿ ನೀವು ಸ್ಫರ್ಧಿಸೋದು ಬಿಡೋದು ಅದು ನಿಮ್ಮ ವೈಯಕ್ತಿಕ. ಈ ಬಾರಿ ಕೆ.ಎನ್.ರಾಜಣ್ಣನಿಗೆ ಮಧುಗಿರಿ ಜನ ತಕ್ಕ ಪಾಠ ಕಲಿಸ್ತಾರೆ. ಈ ಬಾರಿ ಸೋಲೋದು ಗ್ಯಾರಂಟಿ. ಕೂಡಲೇ ರಾಜಣ್ಣ, ದೇವೆಗೌಡರ ಬಳಿ ಕ್ಷಮೆ ಕೇಳ್ಬೇಕು ಎಂದು ಒತ್ತಾಯಿಸಿದರು.
ನಾಲಿಗೆಯನ್ನ ಹರಿಬಿಡುವ ಕೆಲಸವನ್ನ ರಾಜಣ್ಣ ಮಾಡಬಾರದು. ರಾಜಣ್ಣ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೆ ದೇವೇಗೌಡರು. ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿ ರಾಜಕೀಯ ನಿರಾಶ್ರಿತರಾಗಿದ್ದ ರಾಜಣ್ಣ ಅವರನ್ನ ಬೆಳ್ಳಾವಿಯಲ್ಲಿ ನಿಲ್ಲಿಸಿ ಎಂಎಲ್ ಎ ಮಾಡಿದ್ದು ಇದೆ ಜೆಡಿಎಸ್. ಆದ್ರೆ ರಾಜಣ್ಣ ಈ ಪಕ್ಷದ ವಿರುದ್ಧವೇ ದ್ರೋಹ ಬಗೆಯೋ ಕೆಲಸ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಯಿಯಂತ ಪಕ್ಷದ ವರಿಷ್ಠರ ಮೇಲೆ ಈ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೆ. ಯಾವಾಗ್ಲೂ ದೇವೆಗೌಡರ ಋಣವನ್ನ ನಾನು ತಿರಿಸ್ಬೇಕು ಅಂತಾರೆ ರಾಜಣ್ಣ. ಇದೇನಾ ಋಣ ತೀರಿಸೋ ರೀತಿ? ಅವರ ಸಾವನ್ನ ಭಯಸೋದು ಋಣ ತೀರಿಸೋದಾ..? ಕೂಡಲೇ ರಾಜಣ್ಣ ಬಹಿರಂಗವಾಗಿ ದೇವೆಗೌಡರನ್ನ ಕ್ಷಮೆ ಕೇಳ್ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz