ತುಮಕೂರು: ತುಮಕೂರು ನಗರದ ಹೃದಯ ಭಾಗದಲ್ಲಿರುವ ರಾಜಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ ಸಂದರ್ಭದಲ್ಲಿ ಬಹು ವಿಸ್ತೀರ್ಣದ ಭೂಮಿ ನೀಡಿ ಸ್ಥಾಪಿಸಿದ್ದ ಕೆ.ಆರ್.ಜಿ.ಎಂ.ಎಸ್ ಶಾಲೆ ಇದೀಗ ಸಂಕಷ್ಟದಲ್ಲಿದೆ.
ಸ್ವತಂತ್ರ ಪೂರ್ವದಲ್ಲೆ ಶಿಕ್ಷಣ ಸೌಲಭ್ಯಕ್ಕೆ ಮೀಸಲಿದ್ದ ಜಾಗ ಮಾಯವಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ಒಡೆಯರ್ ನೀಡಿದ್ದ ಜಾಗ ಅನ್ಯ ಇಲಾಖೆ ಬಳಕೆಯಾಗ್ತಿದೆ. ಶಾಲೆ ಹೆಸರಿನಲ್ಲಿದ್ದ ಜಾಗ ಬಾಲಭವನದ ಹೆಸರಿಗೆ ವರ್ಗಾವಣೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬಳಕೆಯಾಗ ಬೇಕಿದ್ದ ಜಾಗ ಮತ್ತೊಂದು ಇಲಾಖೆಗೆ ಹೋಗಿದ್ದು ಯಾಕೆ? ಶಾಲೆಯ ಮುಂಭಾಗದ ಆಟದ ಮೈದಾನವೇ ಬೇಕಿತ್ತಾ ಈಜುಕೊಳಕ್ಕೆ ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.
ಖಾಲಿ ಜಾಗದ ಮೇಲೆ ಕಣ್ಣಾಕಿದ ಜಿ.ಪಂ.ನಿಂದ ಈಜು ಕೊಳ ನಿರ್ಮಾಣಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಇತಿಹಾಸದಲ್ಲಿ ಕೆ.ಆರ್.ಜಿ.ಎಂ.ಎಸ್ ಶಾಲೆ ಮರೆಯಾಗುವ ಆತಂಕ ಸೃಷ್ಟಿಯಾಗಿದೆ. ಶಿಕ್ಷಣ ಇಲಾಖೆಯ ತೀವ್ರ ನಿರ್ಲಕ್ಷ್ಯಕ್ಕೆ ಶಾಲೆ ಜಾಗ ಬಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಶಾಲೆ ಜಾಗ ವರ್ಗಾವಣೆಯಾದ ಬಗ್ಗೆ ಪಾಲಿಕೆಯಲ್ಲಿಯೂ ದಾಖಲೆ ಇಲ್ಲ. 1946 ರಿಂದ ಮೈಸೂರು ಒಡೆಯರಿಂದ ಬಳುವಳಿಯಾಗಿ ಬಂದಿದ್ದ ಶಾಲೆ ಜಾಗ ಇಲ್ಲವಾಗಿದೆ. 2002 ರವರೆಗೆ ಕೆ.ಆರ್.ಜಿ.ಎಂ.ಎಸ್. ಶಾಲಾ ಮುಖ್ಯೋಪಾಧ್ಯಾಯರ ಹೆಸರಿಗಿದ್ದ ಶಾಲೆ ಜಾಗ ಏಕಾಏಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಬಾಲಭವನಕ್ಕೆ ವರ್ಗಾವಣೆಯಾಗಿದೆ.
ಆದರೆ ಇದೀಗ ಆ ಶಾಲೆಯ ಜಾಗದಲ್ಲಿ ಈಜುಕೊಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆಯಂತೆ. ಇದನ್ನ ವಿರೋಧಿಸಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆ ಉಳಿಸಿ ಹೋರಾಟ ಸಮಿತಿ ಇದೀಗ ಶಾಲೆ ಜಾಗ ಸರ್ವೆ ಮಾಡಿಸಿ, ಮತ್ತೆ ಶಾಲೆ ಹೆಸರಿಗೆ ಖಾತೆ ಮಾಡಿಸುವಂತೆ ಒತ್ತಾಯಿಸಿದೆ. ಇದರ ಬೆನ್ನಲ್ಲೆ ನಾಳೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರ ಆದೇಶದಂತೆ ಜಂಟಿ ಸರ್ವೆ ಕಾರ್ಯ ನಡೆಸಿ ನಂತರ ವರದಿ ನೀಡುವಂತೆ ಸೂಚಿಸಲಾಗಿದೆ.
ವರದಿ: ಶಿವಕುಮಾರ್ ಮೇಸ್ಟ್ರುಮನೆ / ವಕೀಲರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz