ಸರಗೂರು: ತಾಲ್ಲೂಕಿನ ಪಪಂ ಮುಂಭಾಗದಲ್ಲಿ ಪೌರಕಾರ್ಮಿಕರನ್ನು ಸಹ ಸಂಪೂರ್ಣವಾಗಿ ಖಾಯಂಗೊಳಿಸಲು ಈ ಕುರಿತು ಕಳೆದ 5 ವರ್ಷಗಳಿಂದ ಹಂತ ಹಂತವಾಗಿ ಹೋರಾಟ ನಡೆಸಿಕೊಂಡು ಬರಲಾಗಿತ್ತು. ಇದೀಗ ಎಲ್ಲಾ 31 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು, ಪೌರಕಾರ್ಮಿಕರು ಒಗ್ಗೂಡಿ ರಾಜ್ಯಾದ್ಯಂತ ಸ್ವಚ್ಚತೆ ಕುಡಿಯುವ ನೀರು ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲು ಮುಂದಾಗಿವೆ.
ನೇರ ಪಾವತಿ ಪೌರಕಾರ್ಮಿಕರು ಒಳಚರಂಡಿ ಸಹಾಯಕರು ಮತ್ತು ಮನೆ ಮನೆಗೆ ಕಸ ಸಂಗ್ರಹ ಹಾಗೂ ಕೃಷಿ ಸಾಗಾಣಿಕೆ ಮಾಡುವ ವಾಹನ ಚಾಲಕರ ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ ವಾಟರ್ ಮೇನ್ ಮತ್ತು ಡಾಟಾ ಆಪರೇಟರ್ ಗಳ ಖಾಯಮಾತಿಗಾಗಿ ರಾಜ್ಯಾದ್ಯಂತ ಸ್ವಚ್ಚತೆಯನ್ನು ಸ್ಥಗಿತಗೊಳಿಸಿ, ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭವಾಗಿದ್ದು, ಈ ಹೋರಾಟಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಪ್ರತಿಭಟನೆಯನ್ನುದ್ದೇಶಿಸಿ ಪಟ್ಟಣ ಪಂಚಾಯತ್ ಸದಸ್ಯ ಎಸ್ ಎಲ್.ರಾಜಣ್ಣ ಮಾತನಾಡಿ, ಈ ನೇರ ವೇತನ ಪಾವತಿ ಯೋಜನೆಯು ಪೌರಕಾರ್ಮಿಕರ ಬದುಕಿಗೆ ಮಾರಕವಾಗಿದೆ. ಇದರಿಂದ ಪೌರಕಾರ್ಮಿಕರಿಗೆ ಕೆಲಸದ ಭದ್ರತೆ, ಆರೋಗ್ಯ ಭದ್ರತೆ , ಸಾಮಾಜಿಕ ಭದ್ರತೆ, ಮೃತಪಟ್ಟ ಪೌರಕಾರ್ಮಿಕರ ಕುಟುಂಬಗಳಿಗೆ ಯಾವುದೇ ಅನುಕಂಪದ ಕೆಲಸವಾಗಲಿ ಇರುವುದಿಲ್ಲ. ವಯೋ ನಿವೃತಿಯಾದರೆ, ಇವರಿಗೆ ಪೆಂಗ್ವಿನ್ ಗ್ರಾಜುಟಿ ಇತರೆ ಹಣಕಾಸಿನ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಪೌರಕಾರ್ಮಿಕ ಕುಟುಂಬಗಳು ದಿಕ್ಕು ತೋಚದೇ ಬೀದಿ ಪಾಲಾಗಿದ್ದಾರೆ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷರು ಸರಗೂರು ಶಿವಣ್ಣ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಮುಖಾಂತರ ವೇತನ ಪಾವತಿಸುತ್ತಿರುವುದು ಆಧುನಿಕ ಜೀತ ಪದ್ಧತಿಯಂತಿದೆ ಎಂದರು.
ಪ್ರತಿಭಟನಾಕಾರರ ಬೇಡಿಕೆ
*ಪೌರಕಾರ್ಮಿಕರಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ಮನೆಗಳನ್ನು ನೀಡಬೇಕು.
* ಕಸ ಸಾಗಿಸುವ ವಾಹನ ಚಾಲಕರು ವಾಟರ್ ಮ್ಯಾನ್ ಡೇಟಾ ಆಪರೇಟರ್ ಯು ಜಿ ಡಿ ಕಾರ್ಮಿಕರು ಲೋಡರ್ಸ್ ಕ್ಲೀನರ್ಸ್ ಸ್ಮಶಾನ ಕಾವಲುಗಾರರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ಜಾರಿಗೊಳಿಸಬೇಕು.
* ನೇರ ಪಾವತಿ ಪೌರಕಾರ್ಮಿಕರು ಹಾಕಲಿಕ ಮರಣ ಹೊಂದಿದ್ದಲ್ಲಿ ಅವರ ಮನೆಯ ಸದಸ್ಯೊಬ್ಬರಿಗೆ ಕಾಯಂ ಕೆಲಸ ನೀಡಬೇಕು.
*ನೇರ ಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಮಾಸಿಕ ರಜೆ (ಸಿ ಎಲ್)ನೀಡಬೇಕು.
*ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರಿಗೆ ನೀಡುವ ಬೋನಸ್ ರೂ 7500/ ಗಳನ್ನು ನೆರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುವುದು.
* ಚಾಲಕರಿಗೂ ಬೆಳಗಿನ ಉಪಹಾರ ನೀಡುವುದು.
* ಲೋಡರ್ಸ್ ಕ್ಲೀನರ್ಸ್ ವಾಹನ ಚಲಕರಿಗೂ ಹಾಗೂ ಯು ಜಿ ಡಿ ಕಾರ್ಮಿಕರಿಗೂ ವಿಮೆ ಮತ್ತು ಆರೋಗ್ಯ ತಪಾಸಣೆ ಯನ್ನು ಮೂರು ತಿಂಗಳಿಗೊಮ್ಮೆ ಮಾಡಿಸಬೇಕು.
*ನೇರ ಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇಕಡ 2% ಮೀಸಲಾತಿ ನೀಡುವುದು.
*ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಪೌರಕಾರ್ಮಿಕರ ಮಾದರಿಯಲ್ಲಿಯೇ ನೇರ ಪಾವತಿ ಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದು.
ಈ ಪ್ರತಿಭಟನೆ ಯಲ್ಲಿ ಪಪಂ ಸದಸ್ಯರು ಎಸ್ ಎಲ್ ರಾಜಣ್ಣ, ಚಲುವಕೃಷ್ಣ.ಶ್ರೀನಿವಾಸ, ಹೇಮವತಿ ರಮೇಶ್, ಸಣ್ಣತಾಯಮ್ಮ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ, ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯೆ ಲಕ್ಷ್ಮಿ ಸರಗೂರು, ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆರ್ಮುಗಂ, ಉಪಾಧ್ಯಕ್ಷ ರಾಜು, ಮುಖಂಡರು ಮಂಜುನಾಥ, ನಾಗರಾಜು, ಪುಟ್ಟ ಹನುಮಯ್ಯ, ನೇರಪಾವತಿ ರಂಗನಾಥ, ಸುಬ್ರಹ್ಮಣ್ಯ, ನಂಜಮ್ಮ, ಡ್ರೈವರ್ ನಾಗರಾಜು, ಅಕ್ಷಯ್, ವಿಜಯ್, ನಂದೀಶ್, ವಾಟರ್ ಮೇನ್ ನಾಗೇಶ್ , ನಾಗರಾಜು, ಜೆಸಿಬಿ ರಾಮಚಂದ್ರ, ಸೋಮು., ಪಳಿನಿಸ್ವಾಮಿ ಮತ್ತಿತರರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


