ನವದೆಹಲಿ: ಮೋದಿ ನೋಟ್ ಬ್ಯಾನ್ ಮಾಡಿದ್ರು. ಕಪ್ಪು ಹಣ ನಿರ್ನಾಮ ಮಾಡ್ತೆವೆ ಅಂದ್ರು. ಭ್ರಷ್ಟಾಚಾರ ಕಡಿಮೆ ಆಗಿದೇಯಾ.? ಕಪ್ಪು ಹಣ ನಿಂತಿಲ್ಲ, ಕೇವಲ ಭಾಷಣ ಮಾತ್ರ ಮಾಡಿದ್ರು. ಕೋಟಾನೋಟು ಮತ್ತು ಬ್ಲಾಕ್ ಮನಿ ಬಗ್ಗೆ ಮೋದಿ ಹೇಳಬೇಕು. ಅದ್ರೆ ಮೋದಿ ಇಲ್ಲಿಯವರೆಗೆ ಮಾತೇ ಆಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆ, ಕೇಂದ್ರ ಸರ್ಕಾರದ ವಿರುದ್ಧ ವರುಷ ಎಂಟು ಅವಾಂತರ ನೂರೆಂಟು ಎಂಬ ಪುಸ್ತಕ ಬಿಡುಗಡೆ ಮಾಡಿ ವಿಧಾನಸೌಧದಲ್ಲಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 8 ವರ್ಷ ಕಳೆಯುತ್ತಿದೆ. ಇಡೀ ದೇಶದಲ್ಲಿ ಪ್ರಧಾನಿ ಮೋದಿ ತಮ್ಮ 8 ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಮೋದಿ ಅವರು ಜನರಿಗೆ ಏನ ಭರವಸೆ ಕೊಟ್ಟಿದ್ರು..? ಜನರಿಗೆ ಕೊಟ್ಟ ಭರವಸೆ ಈಡೇರಿಸಿದೇವೆ ಎಂದು ದೊಡ್ಡ ದೊಡ್ಡ ಜಾಹೀರಾತು ಹಾಕಿದ್ದಾರೆ. ರಾಜ್ಯದಲ್ಲಿ ಕೂಡ ದೊಡ್ಡ ದೊಡ್ಡ ಜಾಹೀರಾತು ಹಾಕಿದ್ದಾರೆ. ಮೋದಿ ಅವ್ರು ಹೇಳಿದ್ದನೇನು ಮಾಡಿದ್ದೇನು? ರೈತರು, ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಿರುದ್ಯೋಗ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರ ಕೂಡ ಉದ್ಯೋಗ ಕೊಡ್ತಾ ಇಲ್ಲ. ಸರ್ಕಾರದ ಸಂಸ್ಥೆಗಳನ್ನು ಖಾಸಗಿ ಮಾಡುತ್ತಿದ್ದಾರೆ. ಕೆಲವನ್ನು ಮಾರಿ ಬಿಟ್ಟಿದ್ದಾರೆ. ಇದರಿಂದ ಮೀಸಲಾತಿ ಕೂಡ ಹೋಗಿದೆ. ದಲಿತರಿಗೆ, ಯುವಕರಿಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


