ಮೈಸೂರು: ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನು ಪವಿತ್ರ ಲೋಕೇಶ್ ಅವರನ್ನು ದೂರುವುದಿಲ್ಲ. ತೆಲುಗಿನ ಖ್ಯಾತ ನಟ ನರೇಶ್ ಪತ್ನಿ ರಮ್ಯ ರಘುಪತಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಶ್ ನನ್ನನ್ನು ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ. ಮದುವೆಯಾಗಿ ಎರಡು ವರ್ಷ ಮಾತ್ರ ನರೇಶ್ ಅನ್ಯೋನ್ಯವಾಗಿದ್ದರು. ಆ ಬಳಿಕ ನನಗೆ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ನನ್ನ ಮಗನಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇನೆ.
ಆದರೀಗ ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡುವುದಿಲ್ಲ. ನಾನು ಒಳ್ಳೆಯ ಮನೆತನಕ್ಕೆ ಸೇರಿದವಳು. ನನ್ನ ಉಸಿರಿರುವವರೆಗೂ ನ್ಯಾಯಕ್ಕಾಗಿ ಹೋರಾಟ ನಡಸುತ್ತೇನೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


