ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿಗೆ ಸೇರಿದ ಸಂಪಿಗೆ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೇಂದ್ರದ ಸಿಬ್ಬಂದಿ ಕೆಲಸದ ಸಮಯದಲ್ಲಿ ಸುಳ್ಳು ಕಾರಣ ಹೇಳಿ ಸಹಕಾರ ಸಂಘದ ಕೇಂದ್ರಕ್ಕೆ ಬೀಗ ಹಾಕಿ ತೆರಳಿದ ಘಟನೆ ನಡೆದಿದ್ದು, ಇದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹಕಾರ ಸಂಘದ ಕೇಂದ್ರದಲ್ಲಿ ಸುಮಾರು ಐದು ಜನ ಸಿಬ್ಬಂದಿ ಇದ್ದು, ಕಚೇರಿಗೆ ಸುಮಾರು 1 ಗಂಟೆಗೆ ಹಾಕಲಾದ ಬೀಗ 3 ಗಂಟೆಯವರೆಗೆ ತೆರೆಯದೇ ನಿರ್ಲಕ್ಷ್ಯ ವಹಿಸಿದ್ದಾರೆ. ಯಾರೊಬ್ಬರೂ ಕರ್ತವ್ಯದ ಸಮಯದಲ್ಲಿ ಇಲ್ಲದಿರುವುದನ್ನು ಕಂಡ ಸಾರ್ವಜನಿಕರು ಬೀಗ ಹಾಕಿರುವ ಘಟನೆ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದ ಸಿಬ್ಬಂದಿ ಮತ್ತು ಕಾರ್ಯದರ್ಶಿಗಳು ತುರುವೇಕೆರೆ ಸಭೆಗೆ ಹೋಗಿದ್ದಾರೆ ಎಂದು ಸುಳ್ಳು ಉತ್ತರ ನೀಡಿದ್ದಾರೆನ್ನಲಾಗಿದೆ.
ಈ ಬಗ್ಗೆ ಸಾರ್ವಜನಿಕರ ದೂರಿನನ್ವಯ ತುಮಕೂರಿನಿಂದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯನ್ನು ಫೋನ್ ಕರೆ ಮಾಡುವ ಮೂಲಕ ಕರೆಸಿ, ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರದ ಬೀಗವನ್ನು ಖುದ್ದು ನಿಂತು ಅಧಿಕಾರಿಗಳೇ ತೆಗೆಸಿದ್ದಾರೆ.
ಘಟನೆಯ ಬಳಿಕ ಕರ್ತವ್ಯ ಲೋಪ ಎಸಗಿರುವ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಕರ್ತವ್ಯದ ಸಮಯದಲ್ಲಿ ಲೋಪವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB